ಮನರಂಜನೆ

ಗುರುಶಿಷ್ಯರು’ ನಾಯಕಿ ಯಾರು ಗೊತ್ತಾ?

ಗುರುಶಿಷ್ಯರು’ ನಾಯಕಿ ಯಾರು ಗೊತ್ತಾ?

ಬೆಂಗಳೂರು, ಮೇ 19 :ಗುರುಶಿಷ್ಯರು’ ತಂಡ ಬಹುದಿನಗಳ ಬಳಿಕ ಚಿತ್ರದ ನಾಯಕಿಯನ್ನು ಪರಿಚಯ ಮಾಡಿಸಿದೆ.  ಅಂದಹಾಗೆ ಯಾರದು ಎಂಬ ಕುತೂಹಲಕ್ಕೆ ಉತ್ತರ ನಿಶ್ವಿಕಾ ನಾಯ್ಡು. ಅಮ್ಮ ಐ ಲವ್ ಯು, ಪಡ್ಡೆ ಹುಲಿ, ಜಂಟಲ್ಮನ್ ಮುಂತಾದ ಚಿತ್ರಗಳಲ್ಲಿ ಯಶಸ್ಸು ಪಡೆದ ನಿಶ್ವಿಕಾ ನಾಯ್ಡು ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ ಪ್ರಕ್ರಿಯೆ ಕೂಡ ವಿಶೇಷವಾಗಿದೆ ಎಂದು ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ನಟಿಯರು, 30 ಹೊಸ ಕಲಾವಿದೆಯರು,  ಪರಭಾಷಾ ನಟಿಯರನ್ನು ಕೂಡ ಗುರುಶಿಷ್ಯರು ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ಅವರನ್ನು ಆಯ್ಕೆ ಮಾಡಲಾಯಿತು ಎಂದಿದ್ದಾರೆ.  ಶರಣ್ ರವರು ಈ ಚಿತ್ರದಲ್ಲಿ ನಾಯಕ ನಟನಾಗಿ, ದೈಹಿಕ ಶಿಕ್ಷಕನಾಗಿ ಪಾತ್ರವಹಿಸುತ್ತಿದ್ದಾರೆ. ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಪಾತ್ರ ಮಾಡಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995 ರಲ್ಲಿ ನಡೆಯುವಂಥದ್ದು.  ಈಗಾಗಲೇ ಚಿತ್ರದ ಶೇಕಡ 60ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಉಳಿದ ಭಾಗದ ಚಿತ್ರೀಕರಣ ಸದ್ಯದ ಕೋರೋನಾ ಲಾಕ್ಡೌನ್ ಮುಗಿದ ನಂತರ ಮಾಡಲು ಯೋಜಿಸಲಾಗಿದೆ. ನಾಯಕಿಯನ್ನು ಆಯ್ಕೆ ಮಾಡುವ ಸ್ಕಿಟ್ ತಯಾರು ಮಾಡುವುದು ಕೂಡ ಬಹಳ ಮಜವಾದ ಕೆಲಸವಾಗಿತ್ತು. ನಿಶ್ವಿಕಾ ಅವರು ತುಂಬಾ ಒಳ್ಳೆಯ ನಟಿ. ನಮ್ಮಿಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಶರಣ್ ಹೇಳಿದ್ದಾರೆ. ನಿಶ್ವಿಕಾ ಇದೇ ಮೊದಲ ಬಾರಿಗೆ ಒಂದು ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿರುವುದು. 1995ರ ಕಾಲಘಟ್ಟ ವಾಗಿರುವುದರಿಂದ ಈಗಿನ ಪ್ರೇಕ್ಷಕರಿಗೂ ಬೇರೆಯೇ ರೀತಿಯಾದ ಅನುಭವ ಕೊಡುವಂತ ಸನ್ನಿವೇಶಗಳು ಘಟನೆಗಳು ಚಿತ್ರದಲ್ಲಿವೆ ಎಂದು ನಿರ್ದೇಶಕ ಜಡೇಶ್ ಕುಮಾರ್ ತಿಳಿಸಿದ್ದಾರೆ.

 


ಸುದ್ದಿ ಓದಿ