ಕಜಕಿಸ್ತಾನದತ್ತ ‘ಗಾಳಿಪಟ’
ಬೆಂಗಳೂರು, ಫೆ 02 : ಬಹುನಿರೀಕ್ಷೆಯ ಗಾಳಿಪಟ 2 ಚಿತ್ರತಂಡ ಕಜಕಿಸ್ತಾನದತ್ತ ಪಯಣ ಬೆಳೆಸಿದೆ. ಹೌದು, ಗಾಳಿಪಟ 2ರ ಚಿತ್ರೀಕರಣಕ್ಕಾಗಿ ಯೋಗರಾಜ್ ಭಟ್ ಮತ್ತು ತಂಡ ಕಜಕಿಸ್ತಾನವನ್ನು ಆರಿಸಿಕೊಂಡಿದೆ.ಈ ಮೊದಲು ಯುರೋಪ್ ನ ಜಾರ್ಜಿಯಾ, ಸ್ಕಾಟ್ಲ್ಯಾಂಡ್ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿತ್ತು. ಇನ್ನೇನು ವಿದೇಶಕ್ಕೆ ಹಾರಬೇಕು ಎನ್ನುವಷ್ಟೊತ್ತಿಗೆ ಕೊರೋನಾ ಲಾಕ್ ಡೌನ್ ನಿಂದ ವಿದೇಶಿ ಪಯಣ ರದ್ದಾಗಿತ್ತು. ಇದೀಗ ಚಿತ್ರೀಕರಣದ ಲೊಕೇಶನ್ ಬದಲಾಗಿದೆ.ಗಾಳಿಪಟ-2ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಕಜಕಿಸ್ತಾನದಲ್ಲಿ ಚಿತ್ರೀಕರಣ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಹಾಗಾಗಿ ಸಿನಿಮಾತಂಡ ಈ ತಿಂಗಳ ಕೊನೆಯಲ್ಲಿ ವಿದೇಶಿ ಪಯಣಕ್ಕೆ ಹೊರಡಲಿದೆಯಂತೆ.