ಚಿಕ್ಕೋಡಿ

ಇಂದಿನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಇಂದಿನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕೋಡಿಯ ಪಟ್ಟಣದ ಕೆ.ಎಲ್.ಇ ಆಯುರ್ವೇದ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ. ಬುಧವಾರ 26ನೇ ಏಪ್ರಿಲ್ 2023 ರಿಂದ 01ನೇ ಮೇ 2023 ರವರೆಗೆ ಮುಂಜಾನೆ 9-00 ರಿಂದ ಸಂಜೆ 5-00 ರವರೆಗೆ ಹಮ್ಮಿಕೊಂಡಿದ್ದು  ತಜ್ಞ ಆರ್ಯುವೇದ ವೈದ್ಯರು ಶಿಬಿರದಲ್ಲಿ ಶ್ವಾಸಕೋಶ, ಲಿವರ್ ಸಂಬಂಧಿ ಕಾಯಿಲೆಗಳು, ಕಣ್ಣು, ಕಿವಿ, ಮೂಗು, ಸಂಧಿವಾತ, ಬೆನ್ನು ನೋವು, ಮೂತ್ರ ಹರಳು, ಪ್ರೊಸ್ಟೆಟ ಗ್ರಂಥಿಯ ಊತ, ಮೂಲವ್ಯಾಧಿ, ಚರ್ಮರೋಗ, ಸ್ತ್ರೀ ರೋಗ ಮತ್ತು ಚಿಕ್ಕ ಮಕ್ಕಳ ತೊಂದರೆ ಇರುವ ರೋಗಿಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆ ಮತ್ತು ಪಂಚಕರ್ಮ ಸಲಹೆೆಗಳನ್ನು ನೀಡುತ್ತಾರೆ.

 ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವೈದ್ಯಕೀಯ ನಿರ್ದೇಶಕರಾದ ಡಾ. ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 994577955 

ಸುದ್ದಿ ಓದಿ