ತಾಳಿಕೋಟಿ

ಉಚಿತ ನೇತ್ರ, ಆರೋಗ್ಯ ತಪಾಸಣೆ ಶಿಬಿರ

ಉಚಿತ ನೇತ್ರ, ಆರೋಗ್ಯ ತಪಾಸಣೆ ಶಿಬಿರ

ತಾಳಿಕೋಟೆ09: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಪೌಂಡೇಶನ್ ವತಿಯಿಂದ ಉಚಿತ ನೇತ್ರ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ ಅ.11 ರಂದು ಹಮ್ಮಿಕೊಳ್ಳಲಾಗಿದೆ.

ಕೊಣ್ಣೂರ ಅಸ್ಕಿ ಪೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ ನೇತೃತ್ವದಲ್ಲಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ), ಶ್ರೇಯಾ ಆಸ್ಪತ್ರೆಯ ಮುಖ್ಯಸ್ಥ ಡಾ.ಅಯ್ಯನಗೌಡ ಬಿರಾದಾರ(ಮಡಿಕೇಶ್ವರ), ಎಲುವು ಕೀಲುಗಳ ತಜ್ಞರಾದ ರಾಮಗೌಡ ಬಿರಾದಾರ(ಕೊಣ್ಣೂರ), ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ತಪಾಸಣೆ ನಡೆಸಲಿದ್ದಾರೆ. ತಪಾಸಣೆ ಶಿಭಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವದು. ಶಿಬಿರದ ಉದ್ಘಾಟನಾ ಶಿಬಿರದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಹಿರೆಮಠದ ಡಾ.ಚನ್ನವೀರ ದೇವರು, ಕೊಣ್ಣೂರದ ಶ್ರೀನಾಥಯ್ಯ ಹಿರೇಮಠ, ಹುಲಜಂತಿ ಪಟ್ಟದ ಪೂಜ್ಯರಾದ ಮಾಳಿಂಗರಾಯ ಮಹಾರಾಜರು, ಶರಣಯ್ಯ ಹಿರೇಮಠ ವಹಿಸಲಿದ್ದಾರೆ. ಹುನಗುಂದ ಸಿಪಿಆಯ್ ಸುರೇಶ ಬೆಂಡೆಗುಂಬಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಸಿಪಿಆಯ್ ಸಿ.ಬಿ.ಬಾಗೇವಾಡಿ, ಮುದ್ದೇಬಿಹಾಳ ಸಿಪಿಆಯ್ ಆನಂದ ವಾಘಮೋಡೆ, ಎಸೈಗಳಾದ ವಿನೋದ ದೊಡಮನಿ, ಸಿದ್ದನಗೌಡ ಜಲಪೂರ ಸೇರಿದಂತೆ ಇತರರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರಿಗೆ, ಮಾಜಿ ಸೈನಿಕರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಲಾಗುವದು ಎಂದು ಪೌಂಡೆಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಸುದ್ದಿ ಓದಿ