ಬಿಜೆಪಿಯಿಂದ ಮಾಜಿ ಸಂಸದೆ ಜೆ.ಶಾಂತಾ ನಾಮಪತ್ರ ಸಲ್ಲಿಕೆ

ಬಿಜೆಪಿಯಿಂದ ಮಾಜಿ ಸಂಸದೆ ಜೆ.ಶಾಂತಾ ನಾಮಪತ್ರ ಸಲ್ಲಿಕೆ
ಎಲ್.ಆರ್01 ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿರುವ ಮಾಜಿ.ಸಂಸದೆ ಜೆ.ಶಾಂತಾ ಮತ್ತಿತರರ ಚಿತ

ಲೋಕದರ್ಶನ ವರದಿ

ಬಳ್ಳಾರಿ 16: ಬಳ್ಳಾರಿ ಲೋಕಸಭಾಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯಾಥರ್ಿಯಾಗಿ ಮಾಜಿ ಸಂಸದೆ ಜೆ.ಶಾಂತಾ ಮಂಗಳವಾರ ಜಿಲ್ಲಾಧಿಕಾರಿ ಡಾ|| ರಾಮಪ್ರಸಾದ್ ಮನೋಹರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದ್ಕಕೂ ಮುಂಚಿತವಾಗಿ ಜೆ.ಶಾಂತಾ ಅವರು ಎಸ್ಪಿ ವೃತ್ತದ ಬಳಿ ಇರುವ ಜಿಲ್ಲಾ ಬಿಜೆಪಿ ಕಛೇರಿಯಿಂದ ತೆರಳಿ ಅಲಂಕೃತ ವಾಹನದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ರಾಜ್ಯ ಪ್ರಧಾನ ಕಾರ್ಯದಶರ್ಿ ರವಿಕುಮಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ, ಜೆ.ಶಾಂತಾ ಅವರ ಸಹೋದರರಾದ ಶಾಸಕ ಬಿ.ಶ್ರೀರಾಮುಲು, ನಗರದ ಶಾಸಕ ಗಾಲಿ ಸೋಮಶೇಖರರೆಡ್ಡಿ, ಕೂಡ್ಲಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಸಿರುಗುಪ್ಪ ಶಾಸಕ ಸೋಮಲಿಂಗಪ್ಪ, ಮಾಜಿ ಶಾಸಕ ಸುರೇಶ್ಬಾಬು ಪಕ್ಷದ ಹಲವಾರು ಮುಖಂಡರು ಜಿ.ಪಂ ಅಧ್ಯಕ್ಷೆ ಭಾರತಿತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ್, ಮಹಿಪಾಲ್, ರೈತಮೊರ್ಚದ ಅಧ್ಯಕ್ಷ ಗುರುಲಿಂಗಗೌಡ, ಮಾಜಿ ಸಂಸದ ಪಕಿರಪ್ಪ, ಓಬಳೇಶ್, ಶಿವಕುಮಾರ, ಪ್ರಕಾಶ್ ರೆಡ್ಡಿ, ಕೆ.ಎಸ್.ದಿವಾಕರ್, ನಗರ ಯುವಮೊರ್ಚ ಅಧ್ಯಕ್ಷ ಅಶೋಕಕುಮಾರ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಸುಮಾ, ಕೃಷ್ಣಮೋಹನ್, ಪಾಲಿಕೆ ಸದಸ್ಯ ಮಲ್ಲನಗೌಡ, ಗೋವಿಂದರಾಜುಲು, ಶ್ರೀನಿವಾಸ್ ಮೊತ್ಕರ್, ಮಾಜಿ ಮೇಯರ್ ಕೆ.ಬಸವರಾಜ, ಮಾಜಿ ಶಾಸಕ ಚಂದ್ರನಾಯ್ಕ, ನೇಮರಾಜ ನಾಯ್ಕ, ಸೇರಿದಂತೆ ಹಲವಾರು ಗಣ್ಯರು ಕನಕದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಗಡಗಿ ಚನ್ನಪ್ಪ ವೃತ್ತದ ಮೂಲಕ ಬೈಕ್ರ್ಯಾಲಿ ವಿವಿದ ಜನಪದ ನೃತ್ಯದ ಕಲಾತಂಡಗಳು ಮೆರವಣಿಗೆಯಲ್ಲಿ ಪಕ್ಷದ ದ್ವಜವನ್ನು ಅತ್ತಿತ್ತ ಬೀಸಿ ಮೆರವಣಿಗೆ ರಂಗನ್ನು ಹೆಚ್ಚಿಸಿದರು. ಅದೇ ಮೆರವಣಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ.ಸಂಸದೆ ಜೆ.ಶಾಂತಾ ನಾನು ಈ ಜಿಲ್ಲೆಯ ತವರಿನ ಮಗಳು. ಈ ಹಿಂದೆ 2009ರಲ್ಲಿ ಕ್ಷೇತ್ರದ ಜನತೆ ನನಗೆ ಆಶರ್ೀವಾದ ಮಾಡಿದ್ದಾರೆ. ಅದೇ ರೀತಿ ಈ ಬಾರಿ ಚುನಾವಣೆಯಲ್ಲಿ ಹಿಂದಿನಕ್ಕಿಂತ ಹೆಚ್ಚಿನ ಬಹುಮತಗಳಿಂದ ಆಯ್ಕೆ ಮಾಡಲಿದ್ದಾರೆಂಬ ವಿಶ್ವಾಸವಿದೆ ಎಂದರು. ಬಿ.ಶ್ರೀರಾಮುಲು ಕಳೆದ 5 ಲೋಕಸಭಾ ಚುನಾವಣೆಯಲ್ಲಿಯೂ ಕ್ಷೇತ್ರದ ಜನತೆ ಬಿಜೆಪಿ ಗೆಲ್ಲಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಇದು ಮುಂದುವರೆಯಲಿದೆ. ವಿಧಾನಸಭಾ ಚುನಾವಣೆ ಬೆರೆ ಲೋಕಸಭಾ ಚುನಾವಣೆಯೇ ಬೆರೆ. ಪ್ರಜ್ಞಾವಂತ ಮತದಾರ ದೇಶದ ಪ್ರಧಾನಿ ನರೇಂದ್ರಮೋದಿ ಅವರ ಭ್ರಷ್ಟಾಚಾರ ರಹಿತ ಹಾಗೂ ಜನಪರ ಕಾರ್ಯಕ್ರಮಗಳು ಮನೆ-ಮನೆಗೆ ತಲುಪಿಸಿದ್ದರಿಂದ ನಮ್ಮ ಪಕ್ಷದ ಅಭ್ಯಾಥರ್ಿ ನನ್ನ ಸಹೋದರಿ ಜೆ.ಶಾಂತಾ ಅವರು ಆಯ್ಕೆಯಾಗುವುದು ಖಚಿತ ಎಂದು ವಿಶ್ವಾಸ ಪಟ್ಟರು. ಕಾಂಗ್ರೆಸ್ ನವರು ಅಭ್ಯಾಥರ್ಿಯ ಆಯ್ಕೆಯಲ್ಲಿಯೂ ಸಹ ಎಡವಿದ್ದಾರೆ. ಜಿಲ್ಲೆಯ ವಾಲ್ಮೀಕಿ ಸಮೂದಾಯದ ನಾಲ್ಕಕ್ಕೂ ಹೆಚ್ಚು ಜನ ಇದ್ದರೂ ಇವರಲ್ಲಿ ಒಬ್ಬ ಸಮರ್ಥ ಅಭ್ಯಾಥರ್ಿ ದೊರೆಯಲೇ ಇಲ್ಲವೇ ಎಂಬುವುದು ಜನರ ಪ್ರಶ್ನೆಯಾಗಿದೆ. ಅದಕ್ಕಾಗಿ ಜನರೇ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು. ಇದೇ ವೇಳೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ ಯಾರು ಏನೇ ಹೇಳಲಿ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯ ವಿಜಯದ ಯಾತ್ರೆ ಮುಂದುವರೆಯಲಿದೆ. ನಾನು ಈಗಾಗಲೇ ಕ್ಷೇತ್ರದ ಹಲವೆಡೆ ಸುತ್ತಾಡುತ್ತಿದ್ದು ಬಿಜೆಪಿ ಅಭ್ಯಾಥರ್ಿಯ ಬಗ್ಗೆ ಮತದಾರರೂ ಬಹಳಷ್ಟು ಒಳವು ತೋರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರಸ್ ತಮ್ಮ ಅಭ್ಯಾಥರ್ಿ ಗೆಲುವಿಗೆ ಹೋರಾಡಲು 62ಜನ ಶಾಸಕರು, ಸಂಸದರು, ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿದ್ದರೂ ನಮ್ಮ ಬಿಜೆಪಿ ಪಕ್ಷ ಗೆಲುವುದು ಖಚಿತ ಎಂದರು. 



ಸುದ್ದಿ ಓದಿ