ಕ.ಸ.ಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರಿಗೆ ಭಾರತ ವಿಕಾಸ ಸಂಗಮದಿಂದ ರಾಜ್ಯ ಪ್ರಶಸ್ತಿ

ಕ.ಸ.ಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರಿಗೆ ಭಾರತ ವಿಕಾಸ ಸಂಗಮದಿಂದ ರಾಜ್ಯ ಪ್ರಶಸ್ತಿ

ಬಳ್ಳಾರಿ 31:ಈ ಹಿಂದೆ ಬಳ್ಳಾರಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ನಿಷ್ಟಿ ರುದ್ರಪ್ಪ ಅವರಿಗೆ ಅವರ ಅಪಾರವಾದ ಸೇವೆಯನ್ನು ಗುರುತಿಸಿ ಭಾರತ ವಿಕಾಸ ಸಂಗಮ ವಿಜಯಪುರ ಆಯೋಜಿಸಿದ್ದ ಭಾರತಿ ಸಂಸ್ಕೃತಿ ಉತ್ಸವದಲ್ಲಿ ಕಾಯಕ ಮತ್ತು ಆರೋಗ್ಯ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಇವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಿ ಸಾವಿರಾರು ಜನರ ಸಮ್ಮುಖದಲ್ಲಿ ಗೌರವಿಸಿದರು. ಇವರ ಜೊತೆಗೆ ಬಿಸಲಹಳ್ಳಿ ಬಸವರಾಜ ಭಾಗವಹಿಸಿ ಮಾತನಾಡಿದ ಅವರು ತಮ್ಮ ಸರಳ ಸಜ್ಜನಿಕೆಯಿಂದ ಎಲ್ಲರ ಮನಸನ್ನು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಗೌರವ ಗಳಿಸಲಿ ಎಂದು ಹಾರೈಸಿದರು. ಬಳ್ಳಾರಿಯಲ್ಲಿಯೂ ಸಹ ಕನ್ನಡ ಚೈತನ್ಯ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಭುಕುಮಾರ ಹಾಗೂ ಕನ್ನಡಪರ ಸಂಘಟನೆಗಳು ಇವರಿಗೆ ಶುಭ ಹಾರೈಸಿದರು.

ಸುದ್ದಿ ಓದಿ