ಜನವಸತಿ ಪ್ರದೇಶಗಳಿಂದ ಸ್ಟೀಮ್ಐರನ್ ಘಟಕಗಳ ಸ್ಥಳಾಂತರಕ್ಕೆ ಪಾಲಿಕೆಗೆ ಒತ್ತಾಯ
ಬಳ್ಳಾರಿ 20:ನಗರದ ವಿವಿಧೆಡೆ ಅನಧಿಕೃತ ಸ್ಟೀಮ್ಐರನ್ ಘಟಕ(ಜೀನ್ಸ್ ಉದ್ಯಮ)ಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಇವುಗಳನ್ನು ಜನವಸತಿ ಪ್ರದೇಶಗಳಿಂದ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ನವಕನರ್ಾಟಕ ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳು ಬಳ್ಳಾರಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ, ಪರಿಸರ ಇಲಾಖೆ ಹಾಗೂ ಕಾಮರ್ಿಕ ಅಧಿಕಾರಿಗಳಿಗೆ ಗುರುವಾರದಂದು ಬೆಳಿಗ್ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಬಳ್ಳಾರಿ ನಗರದ ವಿವಿಧೆಡೆ ಸ್ಟೀಮ್ ಐರನ್ ಮತ್ತು ಖಾಜಾ ಬಾಟಕ್ ಉದ್ಯಮಗಳು ಜನವಸತಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಶಬ್ದಮಾಲಿನ್ಯ ಉಂಟಾಗುತ್ತಿದೆ ಅಲ್ಲದೆ ವಿದ್ಯಾಥರ್ಿಗಳಿಗೆ, ಹೃದಯರೋಗಿಗಳಿಗೆ, ವೃದ್ಧರಿಗೆ ತುಂಬಾ ಉಪದ್ರವವನ್ನುಂಟು ಮಾಡುತ್ತಿದೆ. ಎಗ್ಜಾಸ್ಟ್ ಫ್ಯಾನ್ನಿಂದ ಹೊರಹೊಮ್ಮುವ ಬಿಸಿಗಾಳಿ ಇಡೀ ವಾತಾವರಣವನ್ನು ಉಷ್ಣಮಯವಾಗಿಸುತ್ತಿದೆ. ಪರಿಣಾಮ ನಿವಾಸಿಗಳು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ಸಂಘಟನೆಯು ತಿಳಿಸಿದೆ.
ಇತ್ತೀಚೆಗೆ ಮಹಾನಗರ ಪಾಲಿಕೆಯ ಕಚೇರಿಯ ಸಿಬ್ಬಂದಿಯವರು ಬಳ್ಳಾರಿಯ 10ನೇ ವಾಡರ್ಿನ ಮರಿಸ್ವಾಮಿಮಠದ ಹತ್ತಿರದ ನೇಕಾರ ಬೀದಿಯ ಬಿಕ್ಕೋಜಿರಾವ್ ಓಣಿಯಲ್ಲಿ ಅನಧಿಕೃತವಾಗಿ ಸ್ಟೀಮ್ಐರನ್ ಜೀನ್ಸ್ ಉದ್ಯಮವನ್ನು ಪರಿಶೀಲಿಸಿ ರದ್ದುಗೊಳಿಸಲು ಸೂಚಿಸಿದ್ದು, ಅಭಿನಂದನಾರ್ಹವಾಗಿದೆ. ಇಂತಹ ಹಲವಾರು ಘಟಕಗಳು ಬಳ್ಳಾರಿ ನಗರದಲ್ಲಿ ವಿವಿಧೆಡೆ ರಾರಾಜಿಸುತ್ತಿವೆ. ಅವುಗಳನ್ನು ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಆ ಮೂಲಕ ಜನವಸತಿ ಪ್ರದೇಶದ ಜನರ ನೆಮ್ಮದಿ ಮತ್ತು ಆರೋಗ್ಯವನ್ನು ಕಾಪಾಡಬೇಕೆಂದು ಸಂಘಟನೆಯು ಕೋರಿದೆ.
ಪ್ರತಿಯೊಂದು ಘಟಕದಲ್ಲಿಯೂ ಸುಮಾರು 15 ರಿಂದ 20 ಮಹಿಳೆ, ಪುರುಷರು ಮತ್ತು ಬಾಲಕಾಮರ್ಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಘಟಕಗಳಿಂದ ಬಿಸಿಯಾದ ಗಾಳಿ ಮತ್ತು ನೀರು ಬಿಡುಗಡೆಯಾಗುತ್ತಿದೆ. ಹಗಲು ರಾತ್ರಿ ಸ್ಟೀಮ್ ಐರನ್ ಯಂತ್ರದಿಂದ ವಿಚಿತ್ರವಾದ ಘೋರ ಶಬ್ದ ಕೇಳಿ ಬರುತ್ತದೆ. ದೊಡ್ಡ ಹಬ್ಬಹರಿದಿನಗಳ ಪೂರ್ವದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಕಾಮರ್ಿಕ ಇಲಾಖೆಯ ನಿಯಮದಂತೆ ಸದರಿ ಕಾಮರ್ಿಕರಿಗೆ ಯಾವುದೇ ಪಿಎಫ್, ಇಎಸ್ಐ, ವಿಮಾಸೌಲಭ್ಯ, ಸಕರ್ಾರ ನಿಗದಿಪಡಿಸಿರುವ ಕನಿಷ್ಠವೇತನವಾಗಲಿ ಇರುವುದಿಲ್ಲ. ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. ಮನವಿ ಪತ್ರ ಸಲ್ಲಿಕೆ ಸಂದರ್ಭದಲ್ಲಿ ನವಕನರ್ಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಜಿಲ್ಲಾಧ್ಯಕ್ಷ ಕೆ.ರಮೇಶ್, ಮುಖಂಡರಾದ ಕೇಣಿ ಬಸವರಾಜ, ಚಂದ್ರಶೇಖರ ಆಚಾರಿ, ಡಿ.ಮಹೇಶ್ಕುಮಾರ್, ಸೈಯ್ಯದ್ ಚಾಂದ್ಬಾಷ, ಹಲಕುಂದಿ ರವಿಕುಮಾರ್, ಕೆ.ಮಂಜುನಾಥ, ಮುಂಡಾಸದ ಮಲ್ಲಿಕಾಜರ್ುನ, ಮಾದಗೊಂಡ ಮಂಜುನಾಥ, ಎಂ.ದೇವೇಶ್, ಯಮುನಪ್ಪ ಮುಂತಾದವರು ಹಾಜರಿದ್ದರು.