ಶಿಕ್ಷಕರ ವಗರ್ಾವಣೆ ತಕ್ಷಣ ಆರಂಭಕ್ಕೆ ಒತ್ತಾಯಿಸಿ ಫೆ.16ರಂದು ಶಿಕ್ಷಕರ ಬೃಹತ್ ಪ್ರತಿಭಟನಾ ರ್ಯಾಲಿ
ಬಳ್ಳಾರಿ 13: ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವಗರ್ಾವಣೆಯನ್ನು ತಕ್ಷಣದಿಂದ ಆರಂಭಿಸಬೇಕೆಂದು ಒತ್ತಾಯಿಸಿ ಇದೇ ತಿಂಗಳು 16ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ಮತ್ತಿತರ ಪದಾಧಿಕಾರಿಗಳು ಮಾತನಾಡುತ್ತಾ ಸಕರ್ಾರ ವಗರ್ಾವಣೆಗೆ ಆಸ್ಪದ ನೀಡದೇ ಇರುವುದರಿಂದ ಅನೇಕ ಸಮಸ್ಯಗಳಿಂದ ಕೂಡಿದ ಶಿಕ್ಷಕರಿಗೆ ಸಮಸ್ಯೆಯಾಗಿದೆ.
ಪತಿ-ಪತ್ನಿ ಒಂದೆಕಡೆ ಜೀವಿಸಲು ಮಕ್ಕಳು, ಪೋಷಕರು ಮತ್ತು ಸ್ವತ ಅನಾರೋಗ್ಯದಿಂದ ಕೂಡಿದವರಿಗೂ ಸಾಮಾನ್ಯ ವಗರ್ಾವಣೆ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ಪದವಿದರ ಶಿಕ್ಷಕರಿಗೆ ಪರೀಕ್ಷೆಯನ್ನು ಕೈಬಿಟ್ಟು ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ನೂತನ ಪಿಂಚಣಿ ಯೋಜೆನೆ ಹಿಂದಕ್ಕೆ ಪಡೆಯುವ ಕುರಿತು ನಡೆಸಿದ ಹೋರಾಟದ ಹಿನ್ನಲೆಯಲ್ಲಿ ಪರಿಶೀಲನಗೆ ರಚಿರುವ ಸಮಿತಿಯ ನಿಧರ್ಾರವನ್ನು ಕೈಬಿಟ್ಟು ಹಳೇ ಪಿಂಚಣಿಯೋಜೆನೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ.
ಶಿಕ್ಷಕರನ್ನು ಬಿ.ಎಲ್.ಓ ಹಾಗೂ ಇನ್ನಿತರ ಶಿಕ್ಷಣೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕು. ಮುಖ್ಯಗುರುಗಳಿಗೆ 10, 15, 20 25 30 ವರ್ಷಗಳ ಆಥರ್ಿಕ ಸೌಲಭ್ಯ ನೀಡುವ ಕುರಿತು ಶೀಘ್ರ ಆದೇಶ ವರಡಿಸಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರಿಗೆ ಸೇವಾ ಸೌಲಭ್ಯ ದೊರಕಿಸಿಕೊಡುವ ಬಗ್ಗೆ ಗಮನ ಹರಿಸಬೇಕು. ಇನ್ನೂ ಹಲವಾರು ಬೇಡಿಕೆಗಳ್ನು ಈಡೆರಿಸುವಂತೆ ಒತ್ತಾಯಿಸಿ ಫೆ.16ರಂದು ಬೆ11 ಗಂಟೆಗೆ ನಗರದ ಡಾ|| ರಾಜಕುಮಾರ ರಸ್ತೆಯಲ್ಲಿರುವ ನಾರಾಯಣರಾವ್ ಪಾರ್ಕನಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಗುತ್ತದೆ ಎಂದರು. ಇನ್ನೂ ಮುಂದುವರೆದಂತೆ ಈ ಪ್ರತಿಭಟನೆಗೆ ಸಕರ್ಾರ ಮಾರ್ಚ 31ರೊಳಗಡೆ ಸ್ಪಂಧಿಸದಿದ್ದರೇ ವಿದಾನಸೌದ ಚಲೋ ನಡೆಸಲು ಈಗಾಗಲೇ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಮುಖಂಡರುಗಳಾದ ಶಿವಶಂಕರ, ಎಂ.ಅರುಣಾಪ್ರತಾಪ್ ರೆಡ್ಡಿ, ವಿ.ಬಿ.ಜಗಧೀಶ, ಶ್ರೀಮತಿ ಗೀತಾ, ಜೆ.ಪ್ರಭುಗೌಡ, ಸುಮಂಗಳಮ್ಮ, ನಂದಿಶ್ವರನಾಯ್ಕ, ಶ್ರೀಮತಿ ಕೆ.ಕವಿತಾ, ಮಾರೆಣ್ಣ, ಮಲ್ಲೇಶಪ್ಪ, ಸಂತೊಷಕುಮಾರ, ಇಜಾಜ್ ಅಹ್ಮದ್ ಸೇರಿದಂತೆ ಇನ್ನೂ ಹಲವಾರು ಮುಖಂಡರು, ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.