ಹೂವಿನ ಹಡಗಲಿ

ಹೂ.ಹಡಗಲಿ : ಮೇಘನಾಗೆ ಚಿನ್ನದ ಪದಕ

ಹೂ.ಹಡಗಲಿ : ಮೇಘನಾಗೆ ಚಿನ್ನದ ಪದಕ

ಲೋಕದರ್ಶನ ವರದಿ 

ಹೂವಿನಹಡಗಲಿ  7:  ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿನಿ ಮೇಘನಾ ಸುಂಕದ ಅವರು ಪಶು ವೈದ್ಯಕೀಯ ವಿಜ್ಞಾನದಲ್ಲಿ ನ್ನು ರೋಗಶಾಸ್ತ್ರ (ಎಂವಿಎಸ್ಸಿ) ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಗಳಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಸವರಾಜ ಸುಂಕದ ಅವರ ಪುತ್ರಿ ಮೇಘನಾ, ಶಿವಮೊಗ್ಗದ ಸ್ನಾತಕೋತ್ತರ ಪಶು ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಎಂವಿಎಸ್ಸಿ ಪದವಿಯಲ್ಲಿ ಮೊದಲ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. ಈಚೆಗೆ ಬೀದರ್ ಪಶುವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾ-ಲಯದಲ್ಲಿ ಜರುಗಿದ 15ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ವಿದ್ಯಾರ್ಥಿನಿಗೆ ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. 


ಸುದ್ದಿ ಓದಿ