ಗೋಕಾಕ್

ಧುಪದಾಳ ಗ್ರಾ.ಪಂ ಕಾರ್ಯಾಲಯದಲ್ಲಿ ಧ್ವಜಾರೋಹಣ

ಧುಪದಾಳ ಗ್ರಾ.ಪಂ ಕಾರ್ಯಾಲಯದಲ್ಲಿ  ಧ್ವಜಾರೋಹಣ

ಘಟಪ್ರಭಾ: ಸ್ಥಳೀಯ ಪುರಸಭೆಯ ಗಾಂಧಿ ಚೌಕದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ನಿವೃತ ಚಿತ್ರಕಲಾ ಶಿಕ್ಷಕ ಗುಂಡುಪಂತ ಅಪ್ಪಣ್ಣ ಪತ್ತಾರ ನೆರವೇರಿಸಿದರು.

ವಿವಿಧ ಕಡೆಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ 76ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಿಂದ ವಿವಿಧಡೆ ನೆರವೇರಿಸಲಾಗುವ ಧ್ವಜಾರೋಹಣವನ್ನು ಪುರಸಭೆ ಕಾರ್ಯಾಲಯ ಆವರಣದಲ್ಲಿ ಮುಖ್ಯಾಧಿಕಾರಿಗಳಾದ  ಎಮ್.ಎಸ್.ಪಾಟಿಲ ಧ್ವಜಾರೋಹಣವನ್ನು ನೆರವೇರಿಸಿದರು. ಪುರಸಭೆ ಕಾರ್ಯಾಲಯ ಕಛೇರಿಯಲ್ಲಿ ಶೇಖರ ಕುಲಗೂಡ ಧ್ವಜಾರೋಹಣವನ್ನು ನೆರವೇರಿಸಿದರು. ತರಕಾರಿ ಮಾರುಕಟ್ಟೆಯಲ್ಲಿ ಹಿರಿಯರಾದ ಶಿವಬಸು ಮಂಟೂರ, ಧ್ವಜಾರೋಹಣವನ್ನು ನೆರವೇರಿಸಿದರು. ಧುಪದಾಳ ಗ್ರಾ.ಪಂ ಕಾರ್ಯಾಲಯದಲ್ಲಿ ಮಾಜಿ ಗ್ರಾ.ಪಂ ಸದಸ್ಯ ರಾಜಶೇಖರ ರಜಪೂತ ಹಾಗೂ ಬಾಹುಬಲಿ ಕಡಹಟ್ಟಿ ಧ್ವಜಾರೋಹಣವನ್ನು ನೆರವೇರಿಸಿದರು. 

ಹಿರಿಯರಾದ ಡಿ.ಎಂ.ದಳವಾಯಿ, ಪ.ಪಂ ಮಾಜಿ ಸದಸ್ಯರುಗಳಾದ ಗಂಗಾಧರ ಬಡಕುಂದ್ರಿ, ಪ್ರವೀನ ಮಟಗಾರ, ಈರಣ್ಣಾ ಕಲಕುಟಗಿ, ಸಲೀಮ ಕಬ್ಬೂರ, ಮಲ್ಲಪ್ಪ ಕೋಳಿ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಕುಮಾರ ಹುಕ್ಕೇರಿ, ಈಶ್ವರ ಮಟಗಾರ, ಸುರೇಶ ಪೂಜೇರಿ, ಸುನೀಲ ನಾಯಿಕ, ಚಾಂದಸಾಬ ಮೋಮೀನ, ಪರಶುರಾಮ ಗೋಕಾಕ, ಅಪ್ಪಾಸಾಬ ಮುಲ್ಲಾ, ಬರಮು ಗಾಂಡಿವಡ್ಡರ, ಕಾಡಪ್ಪ ಕರೋಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ನೂರ ಪೀರಜಾದೆ, ಗ್ರಾಮ ಲೆಕ್ಕಾಧಿಕಾರಿಗಳಾದ ಮಲ್ಲಿಕಾರ್ಜುನ ಹಂಚಿನಾಳ, ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ: ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷರುಗಳಾದ ಅಲ್ತಾಫ ಉಸ್ತಾದ ಹಾಗೂ ಮುರ್ತ ಜಾ ಮಕಾನದಾರ ನೇರವೇರಿಸಿದರು. ಗ್ರಾಮದ ಹಿರಿಯರು, ಮುಸ್ಲೀಂ ಸಮಾಜ ಹಿರಿಯರು, ಎಸ್.ಡಿ.ಎಮ್.ಸಿ ಸದಸ್ಯರು ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗದವರು ಇದ್ದರು. 



ಸುದ್ದಿ ಓದಿ