ತಾಳಿಕೋಟಿ

ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

ಪ್ರಬಂಧ ಸ್ಪರ್ಧೆಯಲ್ಲಿ  ಜಿಲ್ಲೆಗೆ ಪ್ರಥಮ ಸ್ಥಾನ

ತಾಳಿಕೋಟೆ 17: ಪಟ್ಟಣದ ವಿವಿ.ಸಂಘದ, ಎಸ್.ಕೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಶ್ರೀಶೈಲ ಹೂಗಾರ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಮಹರ್ಷಿ  ಅರವಿಂದರ 150ನೇ ಜನ್ಮದಿನದ ವಾಷಿಕೋತ್ಸವ ಮತ್ತು 75ನೇ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರ ಪುನುರುತ್ಥಾನದಲ್ಲಿ ಅರವಿಂದರ ಕೊಡುಗೆ ಎಂಬ ವಿಷಯದ ಮೇಲೆ ವಿಜಯಪುರ ಜಿಲ್ಲಾ(ವಲಯ) ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರೀಶೈಲ ಹೂಗಾರ ಪ್ರಥಮ ಸ್ಥಾನ ಪಡೆದಿದ್ದಾನೆ.

ವಿದ್ಯಾರ್ಥಿಯ ಸಾಧನೆಗೆ ಮಹಾವಿದ್ಯಾಲಯದ ಚೇರಮನ್ನ ವ್ಹಿ.ಸಿ.ಹಿರೇಮಠ, ಪ್ರಾಚಾರ್ಯ ಆರ್.ವಿ.ಜಾಲವಾದಿ, ಸಾಂಸ್ಕೃತಿಕ ಮತ್ತು ಚರ್ಚಾಕೂಟ ವಿಭಾಗದ ಸಂಚಾಲಕ ಆರ್.ವಿ.ಮಿಸ್ಕಿನ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.



ಸುದ್ದಿ ಓದಿ