ವಿಶ್ವ ಜೂನಿಯರ್ ಶೂಟಿಂಗ್ನಲ್ಲಿ ಬೆಳ್ಳಿ ಗೆದ್ದ ಐಶ್ವರ್ಯಗೆ ಸನ್ಮಾನ
ಲೋಕದರ್ಶನ ವರದಿ
ಹುಬ್ಬಳ್ಳಿ 3: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ, ಜರ್ಮನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಶೂಟರ್ ಐಶ್ವರ್ಯ ರವಿಚಂದ್ರ ಬಾಲೇಹೊಸೂರು ಅವರನ್ನು ಸನ್ಮಾನಿಸಲಾಯಿತು.
ಐಶ್ವರ್ಯ ಅವರಿಗೆ ಶಾಲು ಹೊದಿಸಿ, ಮಾಲಾರೆ್ಣ ಮಾಡಿ ಅಭಿನಂದಿಸಿದ ಗಣ್ಯರು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಸ್ಮರಿಸಿ, ಕೆಎಲ್‌ಇ ಸಂಸ್ಥೆಯ ಹಿರಿಯ ನಿರ್ದೇಶಕರಾಗಿದ್ದ ಆರ್.ಎಸ್. ಹೂಗಾರ ಅವರ ಹೆಸರಿನಲ್ಲಿ ನೀಡಲಾಗುವ ’ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿ’ ಪುರಸ್ಕೃತರನ್ನೂ ಗೌರವಿಸಲಾಯಿತು.
ಸಮಾರಂಭದಲ್ಲಿ ಶಂಕರಣ್ಣ ಈಶ್ವರ್ಪ ಮುನವಳ್ಳಿ, ಡಾ. ಸುರೇಶ್ ಡಿ. ಹೊರಕೇರಿ, ಅಣ್ಣಪ್ಪ ಕಲ್ಲೂರ, ವೀರಣ್ಣ ಗೋವೇಶ್ವರ, ರವಿಚಂದ್ರ ಎಂ. ಬಾಲೇಹೊಸೂರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.