ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ರೈತರ ಪ್ರತಿಭಟನೆ

ರಾಣೇಬೆನ್ನೂರಲ್ಲಿ ರೈತರ ಪ್ರತಿಭಟನೆ

ರಾಣೆಬೆನ್ನೂರು 24:  ಬೆಳೆವಿಮೆಯಲ್ಲಿ ಆಗಿರುವ ಅನ್ಯಾಯ, ಧ್ವನಿಯೆತ್ತುವ ರೈತ ಹೋರಾಟಗಾರರ ಮೇಲೆ ಅನಾವಶ್ಯಕವಾಗಿ ಪೊಲೀಸ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ ಹೋರಾಟಗಾರ, ಧ್ವನಿ ಅಡಗಿಸಲು ಹೊರಟಿರುವ ಬಿಜೆಪಿ ಸರಕಾರದ ದ್ವಂದ್ವ ನೀತಿಯನ್ನು, ವಿರೋಧಿಸಿ ಆಗಸ್ಟ್ 25ರಂದು ರಾಣಿಬೆನ್ನೂರು ನಗರದಲ್ಲಿ  ರೈತರ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ,ಕರ್ನಾಟಕ ರಾಜ್ಯ ರೈತ ಸಂಘದ  ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಂದ್ರ ಗೌಡ ಪಾಟೀಲ್  ಹೇಳಿದ್ದಾರೆ. 

 ಮಂಗಳವಾರ ಪ್ರವಾಸಿ ಮಂದಿರದಲ್ಲಿ ನಡೆದ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ತವರು ಜಿಲ್ಲೆಯಲ್ಲಿ, ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಪ್ರತಿಭಟಿಸಲು ಮುಂದಾದರೆ, ಸರಕಾರ ಹೋರಾಟಗಾರರ ಧ್ವನಿ ಅಡಗಿಸಲು ಮುಂದಾಗುತ್ತದೆ  ಇದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಪಾಟೀಲ,  ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ  ಖುದ್ದು ಹಾಜರಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ರಾಣೆಬೆನ್ನೂರು ನಗರ ಕೆಇಬಿ ವಿನಾಯಕ ದೇವಸ್ಥಾನದಿಂದ ಮೆರವಣಿಗೆ ಹೊರಟು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಮಿನಿವಿಧಾನಸೌಧ ಎದುರುಗಡೆ ಜಮಾವಣೆ ಗೊಳ್ಳುವ ಸಾವಿರಾರು ರೈತರು, ಹುತಾತ್ಮ ತಿಮ್ಮನಗೌಡರ ಪ್ರತಿಮೆ ಬಳಿ ಧರಣಿ ನಡೆಸಲಾಗುವುದು ಎಂದರು. ಜಿಲ್ಲಾ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಕೇಂದ್ರ ಮಧ್ಯ ರಾಜ್ಯ ಸರ್ಕಾರಗಳು ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ. ಹೇಳುವುದೊಂದು  ಮಾಡುವುದೊಂದು ಎನ್ನುವ ನೀತಿ ಅನುಸರಿಸುತ್ತಿದೆ. ನಿರಂತರ ವಿದ್ಯುತ್ ಸಂಪರ್ಕ ನೀಡದೆ ಕೇವಲ ಐದು ತಾಸುಗಳಿಗೆ ಸೀಮಿತಗೊಳಿಸಿದೆ, ಇದರಿಂದ ರೈತರು ಕಂಗಾಲಾಗಿದ್ದಾರೆ,ಓಟಿಎಸ್ ಸೌಲಭ್ಯದಿಂದ ಬ್ಯಾಂಕುಗಳು ರೈತರನ್ನು ಹೊರಗಿಟ್ಟಿದೆ, ರಸಗೊಬ್ಬರ ಕೀಟನಾಶಕಗಳು  ಬೆಲೆ ಏರಿಕೆಯಿಂದ ಕೃಷಿ ಕಾಯಕದಿಂದ ವಿಮುಖರಾಗುತ್ತಿದ್ದಾರೆ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು  ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು ಮಾಧ್ಯಮಗೋಷ್ಠಿಯಲ್ಲಿ ದಿಳ್ಳೆಪ್ಪ ಸತ್ಯಪ್ಪನವರ್, ಬಸವರಾಜ ಕೊಂಗಿ, ಶಿವಪ್ಪ ಬಾಗಲದವರ,, ವೀರೇಶ್, ಚಂದ್ರಪ್ಪ ಬಾಕರ್ಿ  ಸುರೇಶ್ ಮಲ್ಲಾಪುರ, ಸೇರಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶದ ರೈತ ಸಂಘಟನೆಗಳ ಮುಖಂಡರು, ರೈತರು  ಉಪಸ್ಥಿತರಿದ್ದರು 

ಸುದ್ದಿ ಓದಿ