ಶಿಗ್ಗಾವ್

ರೈತರ- ಸಾರ್ವಜನಿಕರ ಭವಣೆ ನೀಗಿಸು ತಾಯಿ: ಮಂಜುನಾಥ ಕುನ್ನೂರ

ರೈತರ- ಸಾರ್ವಜನಿಕರ ಭವಣೆ ನೀಗಿಸು ತಾಯಿ: ಮಂಜುನಾಥ ಕುನ್ನೂರ

ಲೋಕದರ್ಶನ ವರದಿ

ಶಿಗ್ಗಾವಿ 20: ನಾಡಿನಲ್ಲಿ ಬರ ಎದುರಾಗಿದ್ದು ತಾಯಿ ಶ್ರೀಗ್ರಾಮದೇವಿ ಮಳೆ ಬೆಳೆ ಚೆನ್ನಾಗಿ ಆಗಿ ರೈತರ ಮತ್ತು ಸಾರ್ವಜನಿಕರ ಭವಣೆ ನೀಗಿಸು ತಾಯಿ ಎಂದು ತಾಯಿ ಗ್ರಾಮದೇವಿಗೆ ಹರಕೆ ಮಾಡಿದ ನಂತರಶಿಗ್ಗಾವಿ ಮತ್ತು ಗಂಜೀಗಟ್ಟಿ ಸದಭಕ್ತರಿಂದ  ಗ್ರಾಮದೇವಿ ಪುರಾಣ ಪ್ರವಚನ ಯಶಸ್ವಿಯಾಗಿ ನಡೆದಿದೆಎಂದು ಸಮಿತಿಅಧ್ಯಕ್ಷ ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

  ಪಟ್ಟಣದಲ್ಲಿ ಸುದ್ದಿ ಘೋಷ್ಟಿಯನ್ನು ಉದ್ದೇಶಿಸಿ ವರದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಶರನ್ನವರಾತ್ರಿ ನಿಮಿತ್ಯ ನಡೆದ ಶ್ರೀ ಗ್ರಾಮದೇವಿ ಪುರಾಣ ಪ್ರವಚನ ಕಾರ್ಯಕ್ರಮ ತುಂಬಾ ಚೆನ್ನಾಗಿ ಪ್ರತಿ ದಿನದಿಂದ ದಿನಕ್ಕೆ ಹೆಚ್ಚಿನ ಸದಭಕ್ತರು ಪಾಲ್ಗೊಳ್ಳುತ್ತಿದ್ದು ಅಲ್ಲದೇ ಎಲ್ಲರೂ ತನು ಮನ ಧನದಿಂದ ಸಹಾಯ ಮಾಡುತ್ತಿದ್ದು ಹಾಗೂ ಸ್ವಯಂ ಪ್ರೇರಿತವಾಗಿ ಎಲ್ಲರೂ ಪ್ರಸಾದ ಸೇವೆಯನ್ನು ಮಾಡುತ್ತಿದ್ದಿದ್ದು ವಿಶೇಷವಾಗಿದೆ ಎಂದರು.

     ಮಹಾಪುರಾಣ ಪ್ರವಚನವನ್ನು ವೇದಮೂರ್ತಿ ಕುಮಾರಸ್ವಾಮಿ ಹಿರೇಮಠ ಶಾಸ್ತ್ರೀಯವರು ಹಾಗೂ ಸಂಗೀತ ಸೇವೆಯನ್ನು ಶಿವಾನಂದ ಮಂದೇವಾಲ, ತಬಲಾ ಸಾಥ  ಬಸವರಾಜ ಚಳಗೇರಿಯವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದರು. 

   ಗೌರವಾಧ್ಯಕ್ಷ  ಸಿದ್ದಾರ್ಥಗೌಡ ಪಾಟೀಲ ಮಾತನಾಡಿದಸರಾ ಬನ್ನಿ ಮೂಡಿಯುವ ಕಾರ್ಯಕ್ರಮ ತಾಲೂಕ ಕ್ರೀಡಾಂಗಣದಲ್ಲಿ ದಿ 24 ರ ಸಾಯಂಕಾಲ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತದೆ ಎಲ್ಲರೂ ಆಗಮಿಸಬೇಕು ಎಂದರು. 

 ರಾಜುಕುನ್ನೂರ, ಟಿ.ವ್ಹಿ.ಸುರಗೀಮಠ, ಭರಮಜ್ಜ ನವಲಗುಂದ, ಈರಣ್ಣಾ ಬಡ್ಡಿ, ಶಿವಪುತ್ರಪ್ಪ ಜಕ್ಕಣ್ಣವರ, ಮಂಜುನಾಥ ಯಲಿಗಾರ, ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಶಂಕರಗೌಡ್ರ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು 

ಸುದ್ದಿ ಓದಿ