ದೂರದೇಶದ ಹಕ್ಕಿ-ಖುಷಿಗೊಂಡ ಚೇಳ್ಳಗುಕರ್ಿ

ದೂರದೇಶದ ಹಕ್ಕಿ-ಖುಷಿಗೊಂಡ ಚೇಳ್ಳಗುಕರ್ಿ

ಲೋಕದರ್ಶನ ವರದಿ

ಬಳ್ಳಾರಿ 22:ತಾಲೂಕಿನಾದ್ಯಂತ ರಂಗತೋರಣ-ನೀನಸಮ್ ನಾಟಕೋತ್ಸವ ಅಂಗವಾಗಿ ಡಿಸೆಂಬರ್-21 ರಂದು ಚೇಳ್ಳಗುಕರ್ಿಯಲ್ಲಿ ರಂಗತೋರಣದ ನೂತನ ನಾಟಕ ದೂರದೇಶದ ಹಕ್ಕಿ ಕಿಕ್ಕಿರಿದ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಚೇಳ್ಳಗುಕರ್ಿ ಪ್ರೇಕ್ಷಕರು ಖುಷಿಯಲ್ಲಿ ಪುಟಿದೆದ್ದರು.

ಆರಂಭದಲ್ಲಿ ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್ನ ಕೋಶಾಧ್ಯಕ್ಷ ಪಾಟೀಲ್ ವಿರೂಪಾಕ್ಷಗೌಡ ಅವರು ಸಸಿಗೆ ನೀರೆರೆಯುವ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಗೌರವಾಧ್ಯಕ್ಷ ಬಾಣಾಪುರ ಸಿದ್ಧನಗೌಡರು-ಚೇಳ್ಳಗುಕರ್ಿಯಂತಹ ಗಡಿನಾಡು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಪರಂಪರೆಯ ನಾಟಕಗಳನ್ನು ಪ್ರದಶರ್ಿಸಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾ ನಾಟಕ ಕೇವಲ ಮನೋರಂಜನೆಗಲ್ಲ, ನಾಡ ಜನರು ಮನೋವಿಕಾಸಗೊಳ್ಳಲು ಸಹಕಾರಿ ಎಂದರು. ರಾಮೇಶ ಟ್ರಸ್ಟ್, ಜೋಳದರಾಶಿಯ ಅಧ್ಯಕ್ಷರಾದ ಕೆ.ಪೊಂಪನಗೌಡರು ವೇದಿಕೆಯ ಗಣ್ಯರನ್ನು, ನಾಗರಿಕರನ್ನು, ಕಲಾವಿದರನ್ನು ಸ್ವಾಗತಿಸಿ ಪರಿಚಯಿಸಿದರು. ರಂಗತೋರಣದ ಕಾರ್ಯದಶರ್ಿ ಪ್ರಭುದೇವ ಕಪ್ಪಗಲ್ಲು ಹೊಸ ಅಲೆಯ ನಾಟಕಗಳು, ನಾಟಕದಲ್ಲಿಯ ಹೊಸ ಹೊಸ ಕ್ರಿಯೆಗಳು ಗ್ರಾಮೀಣ ಜನತೆಗೂ ಪರಿಚಯವಾಗಲೆಂಬ ಹಂಬಲದಿಂದ, ರಂಗತೋರಣ ತನ್ನ ಹೊಸ ನಾಟಕದೊಡನೆ ನೀನಾಸಮ್ ತಿರುಗಾಟದ ಎರಡು ನಾಟಕಗಳನ್ನು ತಾಲೂಕಿನಾದ್ಯಂತ ಪ್ರದಶರ್ಿಸುತ್ತಿದ್ದು, ಇದಕ್ಕೆ ಸಹಕಾರ ನೀಡಿದ ಕನ್ನಡ ಸಂಸ್ಕೃತಿ ಇಲಾಖೆ, ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್, ದಾಸೋಹ ಸೇವಾ ಸಂಘ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ರಾಮೇಶ ಟ್ರಸ್ಟ್ ಅವರ ನೆರವನ್ನು ಸ್ಮರಿಸಿದರು.

ನಂತರ ರಂಗತೋರಣ ಸಂಸ್ಥೆಯ ಈ ವರ್ಷದ ನೂತನ ನಾಟಕ 'ದೂರದೇಶದ ಹಕ್ಕಿ' ಪ್ರದರ್ಶನವಾಯಿತು. ಒಂದುವರೆ ತಿಂಗಳ ಕಾಲ ಪರಿಶ್ರಮದಿಂದ ತರಬೇತಿಗೊಂಡ ಯುವ ಕಲಾವಿದರು ಲವಲವಿಕೆಯಿಂದ ತಮ್ಮ ಪಾತ್ರಗಳನ್ನು ಮನತುಂಬಿ ಅಭಿನಯಿಸಿದರು. ಗ್ರಾಮೀಣ ಸೊಗಡಿನ ಹುಲಿವೇಶದ ನಾಯಕನ ದುರಂತ ಕಥೆ ಕಿಕ್ಕಿರಿದು ಶಾಮಣ್ಣ ಕಲ್ಯಾಣ ಮಂಟಪದಲ್ಲಿ ತುಂಬಿದ್ದ ಚೇಳ್ಳಗುಕರ್ಿ ಜನ ನಾಟಕವನ್ನು ಖುಷಿಯಿಂದ ವೀಕ್ಷಿಸಿ ಕೊನೆಗೆ ಹರ್ಷವ್ಯಕ್ತಪಡಿಸಿದ್ದು ಸಂತಸ ತಂದಿತು.

ನಾಟಕೋತ್ಸವದ ಈ ದಿನ ನೀನಾಸಮ್ ಕಲಾವಿದರ 'ಆಶ್ಚರ್ಯ ಚೂಡಾಮಣಿ' ನಾಟಕ ಪ್ರದರ್ಶನವಾಗಲಿದೆ. ಎಲ್ಲರಿಗೂ ತಿಳಿದಿರುವ ರಾಮಾಯಣವನ್ನು ಇನ್ನೂ ವಿನೂತನ ರೀತಿಯಲ್ಲಿ ಕಟ್ಟಿಕೊಟ್ಟಿರುವುದು, ನಾಟಕದ ತುಂಬೆಲ್ಲ ಹಲವು ಆಶ್ಚರ್ಯಗಳೇ ತುಂಬಿದ್ದು ನಾಟಕ ಮುದ ನೀಡಲಿದೆ ಎಂದು ಕಾರ್ಯದಶರ್ಿ ತಿಳಿಸಿದರು.


ಸುದ್ದಿ ಓದಿ