ಬಜೆಟ್ನಲ್ಲಿ ಕರ್ನಾಟಕಕ್ಕೆ ನೀರೀಕ್ಷಿಸಿದ ಅನುದಾನಗಳು ಘೋಷಣೆಗಳು ಬಂದಿಲ್ಲ ; ಜನತೆಗೆ ನಿರಾಶೆ
ಹುಬ್ಬಳ್ಳಿ 01: ಇಂದು ಕೇಂದ್ರ ಸರ್ಕಾರದ ಆರ್ಥಿಕ ಬಜೆಟ್ನಲ್ಲಿಯೂ ನಮ್ಮ ರಾಜ್ಯ ಕರ್ನಾಟಕಕ್ಕೆ ನೀರೀಕ್ಷಿಸಿದಂತೆ ಹೊಸ ಅನುದಾನಗಳು ಅಥವಾ ವಿಶೇಷ ಯೋಜನೆಗಳ ಘೋಷಣೆಗಳು ಬಂದಿಲ್ಲ. ನಮ್ಮ ರಾಜ್ಯವು ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ನೀಡುತ್ತಿದ್ದರೂ, ಅದಕ್ಕೆ ತಕ್ಕ ಪ್ರಾಮುಖ್ಯತೆ ಕೇಂದ್ರ ಬಜೆಟ್ನಲ್ಲಿ ಕಾಣಿಸಲಿಲ್ಲ.
ಕರ್ನಾಟಕ ಸರ್ಕಾರವು ನೀರಾವರಿ, ಕುಡಿಯುವ ನೀರಿನ ಯೋಜನೆಗಳು, ರಸ್ತೆ ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನೇಕ ಮನವಿಗಳನ್ನು ಸಲ್ಲಿಸಿದ್ದರೂ, ಈ ಬಜೆಟ್ನಲ್ಲಿ ಅವುಗಳಿಗೆ ಸ್ಪಷ್ಟ ಬೆಂಬಲ ಅಥವಾ ಅನುದಾನ ದೊರೆಯಲಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ನಿಧಾನಗೊಳ್ಳುವ ಸಾಧ್ಯತೆ ಇದೆ.
ರಾಜ್ಯವು ದೇಶಕ್ಕೆ ಹೆಚ್ಚು ತೆರಿಗೆ ಕೊಡುಗೆ ನೀಡುವ ಪ್ರಮುಖ ರಾಜ್ಯವಾಗಿದ್ದರೂ, ಕೇಂದ್ರಮಟ್ಟದಲ್ಲಿ ಅದರ ಅಗತ್ಯಗಳಿಗೆ ತಕ್ಕಸ್ಪಂದನೆ ದೊರೆಯುತ್ತಿಲ್ಲ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ನೀರೀಕ್ಷೆ ಇಟ್ಟು ಕೊಂಡಿದ್ದರೂ, ಅವರಿಗೆ ಸ್ಪಷ್ಟ ನೆರವು ಕಾಣಿಸಲಿಲ್ಲ.
ರಾಜ್ಯದ ಅಭಿವೃದ್ಧಿಗೆ ಅಗತ್ಯ ವಿರುವ ಅನೇಕ ಯೋಜನೆಗಳು ಇನ್ನೂ ಬಾಕಿಯೇ ಉಳಿದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ನಮ್ಮ ಜನ ಪ್ರತಿನಿಧಿಗಳು ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ ರಾಜ್ಯಕ್ಕೆ ನ್ಯಾಯವಾದ ಅನುದಾನಗಳನ್ನು ತರುವ ಪ್ರಯತ್ನ ಮಾಡಬೇಕಾಗಿದೆ. ಒಟ್ಟಿನಲ್ಲಿ, ಈ ಬಜೆಟ್ನಲ್ಲಿ ಕರ್ನಾಟಕಕ್ಕೆ ಯಾವುದೇ ಹೊಸ ಮಹತ್ವದ ಘೋಷಣೆಗಳು ಇಲ್ಲದಿರುವುದು ಜನರಲ್ಲಿ ನಿರಾಶೆಯನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ರಾಜ್ಯದ ಅಗತ್ಯಗಳನ್ನು ಪರಿಗಣಿಸಿ ಸೂಕ್ತ ಅನುದಾನ ನೀಡಬೇಕಾಗಿದೆ.