ರಾಣೆಬೆನ್ನೂರ

ಕಾಲೇಜಿನಲ್ಲಿ ಶೈಕ್ಷಣಿಕ ಸೃಷ್ಟಿಗೆ ಎಲ್ಲರೂ ಕೈಜೋಡಿಸಿ: ಶ್ರೀಧರ್

ಕಾಲೇಜಿನಲ್ಲಿ ಶೈಕ್ಷಣಿಕ ಸೃಷ್ಟಿಗೆ ಎಲ್ಲರೂ ಕೈಜೋಡಿಸಿ: ಶ್ರೀಧರ್

ರಾಣೇಬೆನ್ನೂರ21: ಯಾವುದೇ ಕಾಲೇಜುಗಳು ವಿದ್ಯಾರ್ಥಿ ಗಳ ಪಾಲಿಗೆ ದೇವಾಲಯಗಳು ಇದ್ದಂತೆ, ಪವಿತ್ರವಾದ ದೇವಾಲಯಗಳಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು, ಸುಮ್ಮನೆ  ಕಾಲಹರಣ ಮಾಡದೇ, ಬೌದ್ಧಿಕ ಕೌಶಲ್ಯತೆಯನ್ನು ಮೆರೆಯಲು ಸಿಕ್ಕ ಸಮಯದಲ್ಲಿಯೇ ಅವಕಾಶ ವಂಚಿತರಾಗದಂತೆ ತಮ್ಮ ಶೈಕ್ಷಣಿಕ ಪ್ರಭುದ್ಧತೆ ಮೆರೆದಾಗ ಮಾತ್ರ  ದೇಶದ ಭವಿಷ್ಯದ ನಾಗರಿಕರಾಗಲು ಸಾಧ್ಯವಾಗುವುದು ಎಂದು  ಎಸ್ಎಫ್ಐ ತಾಲೂಕ ಘಟಕದ ಅಧ್ಯಕ್ಷ ಶ್ರೀಧರ ಚಲವಾದಿ ಹೇಳಿದರು. 

ಗುರುವಾರದಿಂದ ಆರಂಭಗೊಂಡಿರುವ, ನಗರ ಹೊರವಲಯದ ಹುಣಸಿಕಟ್ಟಿ ರಸ್ತೆಯ ಸರಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ನೂತನ ಪದವಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ದೇಶ ವಿಶ್ವದ ಎಲ್ಲ ರಾಷ್ಟ್ರಗಳಿಗಿಂತಲೂ ಭದ್ರ ಮತ್ತು ಬಲಿಷ್ಠವಾಗಿದೆ, ನಮ್ಮ ಪೂರ್ವಜ ಶರಣರು, ಸಾಧು ಸಂತರು ಕಂಡ ಕನಸು ನನಸಾಗಬೇಕಾದರೆ.

ಯುವ ಜನಾಂಗ ಪ್ರಭುತ್ವವನ್ನು ಸಾಧಿಸಬೇಕಾಗುತ್ತದೆ. ಸಾಧನೆಗೆ ಸಾವಿರ ಮೆಟ್ಟಿಲು ಎನ್ನುವ  ವಾಣಿಯಂತೆ, ಏಕಾಗ್ರತೆಯಿಂದ, ಶೈಕ್ಷಣಿಕವಾಗಿ  ನಿರಂತರ ಅಧ್ಯಯನ ಮಾಡುವುದರ ಮೂಲಕ ಭಾರತದ ಭವಿಷ್ಯ ಮತ್ತಷ್ಟು ಉಜ್ವಲಗೊಳಿಸಲು ಮುಂದಾಗಬೇಕು ಎಂದರು.

 ತಾಲ್ಲೂಕ ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಸಹಕಾರ್ಯದರ್ಶಿ  ವೀಣಾ ಘಂಟೆರ್, ಉಪಾಧ್ಯಕ್ಷ ಹೊನ್ನಪ್ಪ ಕುದರಿಹಾಳ, ಮುಖಂಡರಾದ ಶಿವು ಕೆ, ಪ್ರಜ್ವಲ್ ತಳವಾರ್, ನವೀನ್ ಅಂಬಿಗೇರ,  ಗುಡ್ಡೆಶ್ ಹರೋಗೊಪ್ಪ, ವಿದ್ಯಾಶ್ರೀ, ಮಂಜುಳಾ, ಮಾಲಾ, ಸಂಗೀತಾ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು 

ಸುದ್ದಿ ಓದಿ