ಆರ್ಟಿಇಎಸ್ ಮಹಾವಿದ್ಯಾಲಯದಲ್ಲಿ ಪರಿಸರ ದಿನಾಚರಣೆ
ಲೋಕದರ್ಶನ ವರದಿ
ರಾಣೇಬೆನ್ನುರು 07: ಜಿಲ್ಲಾಜೈವಿಕ ಇಂಧನ ಉಸ್ತುವಾರಿ ಸಮಿತಿ, ಸಾಮಾಜಿಕಅರಣ್ಯ ಇಲಾಖೆ, ರಾಣೇಬೆನ್ನೂರು, ಹಾವೇರಿ, ರಾಣೇಬೆನ್ನುರು ತಾಲ್ಲೂಕ ಎಜ್ಯುಕೇಶನ್ ಸೊಸೈಟಿ (ಆರ್.ಟಿ.ಇ.ಎಸ್) ಪದವಿ ಮಹಾವಿದ್ಯಾಲಯ, ರಾಣೇಬೆನ್ನೂರು, ಮತ್ತುಜಿಲ್ಲಾ ಮುಂದಾಳು ಸಂಸ್ಥೆ: ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ದಿ ಸೇವಾ ಸಂಸ್ಥೆ (ನೀಡ್ಸ್), ರಾಣೇಬೆನ್ನೂರು. ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆದಂದು 200 ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಜೈವಿಕಇಂಧನ ಮಾಹಿತಿ, ತಿಳುವಳಿಕೆ ಮತ್ತು ಸಸಿ ನೆಡುವಕಾರ್ಯಕ್ರಮವನ್ನು ಅರ್.ಟಿ.ಇ.ಎಸ್ ಪದವಿ ಕಾಲೇಜ್, ಪಿ.ಬಿ.ರೋಡ್, ರಾಣೇಬೆನ್ನೂರು ಹಮ್ಮಿಕೊಳ್ಳಲಾಯಿತು.
ಇರುವುದೊಂದೇ ಭೂಮಿ ಇದರ ರಕ್ಷೆಣೆ ನಮ್ಮೆಲರ ಹೊಣೆ,ಪರಿಸರ ಹಾನಿಯಿಂದ ಆಗುತ್ತಿರುವ ಪ್ರಕೃತಿಯಲ್ಲಿನ ಬದಲಾವಣೆ ಕಾಪಾಡಬೇಕು, ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಬಳಕೆ ವಸ್ತುಗಳನ್ನು ನಿಷೇಧಿಸಬೇಕು, ನೈಸಗರ್ಿಕವಾಗಿ ಕೊಳೆಯುವಂತಹ ವಸ್ತುಗಳನ್ನು ನಮ್ಮದಿನನಿತ್ಯದಜೀವನದಲ್ಲಿಬಳಕೆಗೆ ರೂಢಿಮಾಡಿಕೊಳ್ಳಬೇಕೆಂದು ಉದ್ಘಾಟಕರಾದ ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳಾದ ಎಚ್.ಎಫ್.ಅಕ್ಕಿ, ಹೇಳಿದರು.
ಪರಿಸರದಅಸಮತೋಲನ ತಾಪಮಾನ ಏರಿಕೆಗೆಯೂ ಒಂದು ಕಾರಣವಾಗಲಿದೆ. ಗಾಳಿ ನೀರು ಕಲುಷಿತಗೊಳ್ಳುತ್ತಿದೆ, ಹೀಗಾಗಿ ಹೆಚ್ಚು-ಹೆಚ್ಚು ಸಸಿ ನೆಡಬೇಕು ಮತ್ತು ಅವುಗಳ ಪೋಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವ್ಯಕ್ತಿಗತವಾಗಿ ಪರಿಸರ ಸೇರಿದಂತೆ ನೀರು, ಇಂಧನ ಬಳಕೆ ಮೇಲೆ ನಿಯಂತ್ರಣ ಮಾಡಬೇಕುಎಂದುಆರ್.ಟಿ.ಇ.ಎಸ್. ಕಾಲೇಜಿನಐ.ಕ್ಯೂ.ಎ.ಸಿ ಸಂಯೋಜಕ ಡಾ. ಮಧುಕುಮಾರ ಆರ್. ಹೇಳಿದರು.
ಕಾರ್ಯಕ್ರಮದಲ್ಲಿ ಆರ್.ಟಿ.ಇ.ಎಸ್ ಪದವಿ ಕಾಲೇಜ್, ಅಧ್ಯಕ್ಷರಾದಸುಭಾಷ್ ವ್ಹಿ ಸಾವುಕಾರ, ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸೀತಾ ಕೋಟಿ, ಅಧ್ಯಕ್ಷತೆಯ ಸ್ಥಾನ ಅಲಂಕರಿಸಿದ್ದಆ ರ್.ಟಿ.ಇ.ಎಸ್ ಪದವಿ ಕಾಲೇಜ್ ಪ್ರಾಚಾರ್ಯ ಎಫ್.ಎಚ್.ಮಾಚೇನಹಳ್ಳಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳು ಡಾ.ಸರಸ್ವತಿ ಎಚ್.ಬಮ್ಮನಾಳ, ಸಂಪನ್ಮೂಲ ವ್ಯಕ್ತಿ ಡಾ. ಡಿ.ವಿ.ಜಂಗಣ್ಣನವರ್, ಎಸ್.ಎನ್. ಮುನ್ವರಲಿಖಾನ್, ಡಿ.ಟಿ.ಲಮಾಣಿ, ಪ್ರವೀಣ್ ಎನ್.ಎ, ಆರ್.ಎಸ್.ನಾಯಕ, ಮಹಾವಿದ್ಯಾಲಯ ಬೋಧಕ ಹಾಗೂ ಬೋಧಕೇತರ ವರ್ಗ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ ಸೇವಕಿಯರು, ನೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು