ರಾಣೆಬೆನ್ನೂರ

ಮಾತಾ ಪಬ್ಲಿಕ್ ಶಾಲೆಯಲ್ಲಿ ಪರಿಸರ ದಿನಾಚರಣೆ

ಮಾತಾ ಪಬ್ಲಿಕ್ ಶಾಲೆಯಲ್ಲಿ ಪರಿಸರ ದಿನಾಚರಣೆ

ಲೋಕದರ್ಶನ ವರದಿ

ರಾಣೆಬೆನ್ನೂರು 09: ನಗರದ ಚೋಳಮರಡೇಶ್ವರ ನಗರದಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ ಈ ದಿನ ಪರಿಸರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಉಪಾಧ್ಯಕ್ಷರಾದ ಕೆ ಎಪ್ ಆನ್ವೇರಿ ಗುರುಗಳು ಮಾತನಾಡಿ ಪರಿಸರ ಅವಶ್ಯಕತೆ ಅದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿದರು, ಶಾಲಾ ಆಧ್ಯಕ್ಷರಾದ ಬಿ ಹೆಚ್ ಮಡ್ಲೂರ ಮಾತನಾಡಿ ಸಂವಿಧಾನದ ಬಗ್ಗೆ ವಿವರಿಸಿದರು.ಅಲ್ಲದೇ ಶಾಲಾ ಮುಖ್ಯೋಪಾಧ್ಯಯರಾದ ಚನಬಸಪ್ಪ ಎಸ್ ತಂಪಾದ ಗಾಳಿ ಮರದಿಂದ ಅವುಗಳ ರಕ್ಷಣೆ ನಮ್ಮಿಂದ ಗಿಡ ನೆಡಿ..ಮರ ಬೆಳಸಿ ಪರಿಸರ ಉಳಿಸಿ ಎಂದು ಪರಿಸರದ ಅವಶ್ಯಕತೆ ಬಗ್ಗೆ ತಿಳಿಸಿದರು. ಶಾಲಾ ಸದಸ್ಯರಾದ ಲತಾ ಸಿ ಎಸ್ ಹಾಗೂ ಸಿಬ್ಬಂದಿಗಳಾದ ಆಶಾ, ನಾಗೇಂದ್ರ ಮಡಿವಾಳರ, ಪುಷ್ಪಲತಾ, ಅನ್ನಪೂರ್ಣ ಕಂಬಳಿ,ಅನುಪಮ ರೇಖಾ ದಾವಲಬಿ, ಚೌಡಮ್ಮ ,ಸವಿತಾ ಶಿಕ್ಷಕಿಯರು ಪಾರಮ್ಮ ಚೆನ್ನಗಿರಿ ಉಪಸ್ಥಿತರಿದ್ದರು 

ಸುದ್ದಿ ಓದಿ