ಹೂವಿನ ಹಡಗಲಿ

ಆರೋಗ್ಯದ ಬಗ್ಗೆ ನೌಕರರು ಕಾಳಜಿ ವಹಿಸಿ : ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ

ಆರೋಗ್ಯದ ಬಗ್ಗೆ ನೌಕರರು ಕಾಳಜಿ ವಹಿಸಿ  : ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ

ಹೂವಿನ ಹಡಗಲಿ  10:  ಅತ್ಯಂತ ಒತ್ತಡದಲ್ಲಿ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ ಎಂದು ಕ್ಷೇತ್ರ ಛಿ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಸೊಪ್ಪಿನ ವೀರಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ,ಎಂ ಡಿ ಆರ್ ಎಸ್ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಮೊದಲಗಟ್ಟ ,ಮಿಡಿತ ಹೆಲ್ತ್‌ ಕೇರ್ ಸಿಸ್ಟಮ್ಸ್‌  ಮತ್ತು ಶ್ರೀ ಸಾಯಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ ಇವರ ಸಹಯೋಗದಲ್ಲಿಆಯೋಜಿಸಿದ್ದ ತಾಲೂಕಿನ ನೌಕರರ ಬಂಧುಗಳಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷರಾದ ಎ ಕೊಟ್ರಗೌಡ ಮಾತನಾಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ ಬಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಮಾದೇಶ್ ಕನ್ನಿಹಳ್ಳಿ ,ಡಯಟ್ ಬಳ್ಳಾರಿಯ  ಪ್ರಾಧ್ಯಾಪಕರಾದ ಮಯೂರ್ ಗದುಗಿನ ಇದ್ದರು. 


ಸುದ್ದಿ ಓದಿ