ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ; ಶಾಸಕ ಪಾಟೀಲ
ತಾಳಿಕೋಟೆ 07: ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ದೇಶದ ಸತಪ್ರಜೆಗಳನ್ನ ರೂಪಿಸುವಂತ ಮಾಲ್ಯಾಧಾರಿತ ಶಿಕ್ಷಣ ಬೊಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಮಂಗಳವಾರ ಬಿಎಲ್ಡಿಇ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಬಸವರಾಜ ಅಸ್ಕಿ ಕುಟುಂಬದಿಂದ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನ, ಗುರುವಂದನಾ ಕಾರ್ಯಕ್ರಮ ಹಾಗೂ 108 ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ವೃತ್ತ ಎಲ್ಲಾ ವೃತ್ತಿಗಳಲ್ಲಿ ಪವಿತ್ರವಾದ ವೃತ್ತಿಯಾಗಿದೆ. ಶಿಕ್ಷಕ ಒಬ್ಬ ವ್ಯಕ್ತಿಯಲ್ಲ ಅದೊಂದು ಶಕ್ತಿಯಾಗಿದೆ. ಶಿಕ್ಷಕನಿಗೆ ನಿವೃತ್ತಿ ಎನ್ನುವದೇ ಇಲ್ಲ. ವಿದ್ಯಾರ್ಥಿಗಳ ಶ್ರೇಯೊಭಿವೃದ್ದಿಯಲ್ಲಿಯೇ ಶಿಕ್ಷಕ ಸಂತೋಷ ಪಡುತ್ತಾನೆ. ನನ್ನ ಅಧಿಕಾರವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಪ್ರಾಥಮಿಕ ಹಂತದಲ್ಲಿಯೇ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡಲು ಶಿಕ್ಷಕರು ಮುಂದಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ಬಿದರಕುಂದಿ, ಮಡಿಕೇಶ್ವರ ಹಾಗೂ ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನಮಠದ ಫೀಠಾಧಿಪತಿ ಶಿವಕುಮಾರ ಸ್ವಾಮಿಜಿ ಮಾತನಾಡಿ, ದೇಶದಲ್ಲಿ ಶಿಕ್ಷಕರಿಗೆ ವಿಶೇಷವಾದ ಗೌರವವಿದೆ. ಶಿಕ್ಷಕರು ಓದಿನ ಪ್ರರ್ವತ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜ್ಞಾನ ದಾಹದಿಂದ ಬರುವ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ನಿಜವಾದ ಶಿಕ್ಷಕನಾಗುತ್ತಾನೆ. ಶಿಕ್ಷಕರಿಂದ ದೇಶ ಕಟ್ಟಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ದುಮುಕಿದ್ದು ವಿಷಾಧನೀಯ. ಶಿಕ್ಷಕರನ್ನು ಬೇರೆ ಕಾರ್ಯಗಳಿಗೆ ನಿಯೋಜಿಸುವದನ್ನು ಬಿಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರ ಬಲಿಷ್ಠವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರೂರದ ಕರ್ನಾಟಕ ಗ್ರಾಮೀಣ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾ.ಬಸವರಾಜ ಅಸ್ಕಿ, ಶಿಕ್ಷಕ ಎರಡನೆ ತಾಯಿ ಇದ್ದಂತೆ. ವ್ಯಕ್ತಿಯ ಬದಲಾವಣೆ ಮಾಡುವ ಶಿಕ್ಷಕ ಎಂದರು.
ಸನ್ಮಾನಿತರ ಪರವಾಗಿ ಬ.ಸಾಲವಾಡಗಿ ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಸುಮಂಗಲಾ ಕೋಳೂರ, ಪ್ಕರ್ತ ಡಿ.ಬಿ.ವಡವಡಗಿ, ನಿವೃತ್ತ ಸಿಪಿಆಯ್ ಸಿ.ಬಿ.ಬಾಗೇವಾಡಿ ಮಾತನಾಡಿದರು. ನಿವೃತ್ತ ಶಿಕ್ಷಕರು ಸೇರಿದಂತೆ 108 ಶಿಕ್ಷಕರನ್ನು, ನಿವೃತ್ತ ಅಧಿಕಾರಿಗಳನ್ನ, ಪರ್ತಕರ್ತರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ವಿರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಿದ್ದನಗೌಡ ದೇಸಾಯಿ, ಸಮ್ಮುಖವನ್ನು ಶ್ರೀನಾಥಯ್ಯ ಹಿರೇಮಠ ವಹಿಸಿದ್ದರು.ವೇದಿಕೆಯಲ್ಲಿ ಸಿದ್ದನಗೌಡ ಹರನಾಳ, ಕುಬೇರಪ್ಪಗೌಡ ಅಸ್ಕಿ, ನಿವೃತ್ತ ದೈಹಿಕ ಪರಿವಿಕ್ಷಕ ಬಿ.ಆರ್.ಪೊಲೀಸ್ಪಾಟೀಲ, ಧಾರವಾಡ ಶಿಕ್ಷಣ ಇಲಾಖೆ ಆಯುಕ್ತ ಕಚೇರಿಯ ಉಪನಿರ್ದೇಶಕ ಎಸ್.ಬಿ.ಬಿಂಗೇರಿ, ಎಸ್.ಆಯ್.ಕಡಕೊಳ, ಜಿ.ಜಿ.ಅಸ್ಕಿ, ಬಿ.ಎಸ್.ಬಿರಾದಾರ, ಸಿ.ಆರ್.ಪೊಲೀಸ್ಪಾಟೀಲ ಸೇರಿದಂತೆ ಇತರರು ಇದ್ದರು. ಎಮ್.ಎನ್.ಅಸ್ಕಿ ಸ್ವಾಗತ, ಬಾಪುಗೌಡ ಭಂಟನೂರ ನಿರೂಪಿಸಿದರು.