ಶಿಂದಿಕುರಬೇಟ ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿ
ಘಟಪ್ರಭಾ 02: ಸಮೀಪದ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಅವಿರೋಧವಾಗಿ ಜರುಗಿತು.
ಅಧ್ಯಕ್ಷರಾಗಿ ಮಂಜುನಾಥ ಬಾಬು ಗುಡಕೇತ್ರ ಉಪಾಧ್ಯಕ್ಷರಾಗಿ ವಿಠ್ಠಲ ಶಿವಪ್ಪ ಜೊತೆನ್ನವರ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಎಸ್.ಎ.ದೊಡಮನಿ ತಿಳಿಸಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಬಾಬು ಗುಡಕೇತ್ರ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿದ್ದು ವಿಶೇಷವಾಗಿದೆ.
ಗ್ರಾಮದ ಮುಖಂಡರಾದ ಭೀಮಶಿ ಬಿರನಾಳಿ, ಸಿದ್ಧಾರೂಢ ಕಂಬಾರ, ಜ್ಯೋತ್ತೆಪ್ಪ ಬಂತಿ,ದಾವಲ ದಬಾಡಿ,ಮಂಜುನಾಥ ಶೆಂಡೂರಿ, ನಿಸಾರ ಜಕಾತಿ, ಸಿದ್ದಪ್ಪ ಕಟ್ಟಿಕಾರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀಶೈಲ ಕೆಂಪಣ್ಣಾ ಮಾನೆಪ್ಪಗೋಳ, ಪರುಶರಾಮ ಮಲ್ಲಪ್ಪ ಕೋಳಿ, ಬಸವಣ್ಣಿ ಶಿದ್ರಾಮ ದೇವರಮನಿ, ಬಸಪ್ಪ ಯಮನಪ್ಪ ಹೊಸಪೇಟಿ, ಶೋಭಾ ಶಿವಲಿಂಗ ಮೇಲ್ಮಟ್ಟಿ, ಪಾರವ್ವ ವಿಠ್ಠಲ ಸತ್ತಿಗೇರಿ, ಶಿವಲಿಂಗ ಕಲ್ಲಪ್ಪ ಹುಕ್ಕೇರಿ, ಓಂಕಾರೆಪ್ಪಾ ಹಣಮಂತ ಬಂಡಿವಡ್ಡರ, ಪರಸಪ್ಪ ಯಲ್ಲಪ್ಪ ಪಾಟೀಲ, ಕೆಂಪಣ್ಣಾ ಶಿದ್ರಾಮ ದೇವರಮನಿ ಸೇರಿದಂತೆ ಹಾಗೂ ಸಿಬ್ಬಂದಿ ವರ್ಗದವರು ಇದ್ದರು