ಗ್ರಾಪಂ ಅಧ್ಯಕ್ಷರಾಗಿ ಮಾನಂದಾ ಮಾದರ ಆಯ್ಕೆ
ಸಿಂದಗಿ 22: ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯತಿಗೆ ಹಿಂದಿನ ಅಧ್ಯಕ್ಷ ಅರ್ಜುನ್ ದೊಡಮನಿ ಅವರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಾನಂದಾ ಪರಸುರಾಮ ಮಾದರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಪಂ ಇಓ ಬಾಬು ರಾಠೋಡ ಅವರು ಪ್ರಕಟಿಸಿದರು.
ವಿಜಯೋತ್ಸವ; ಒಟ್ಟು 13 ಜನ ಸದಸ್ಯರ ಸಂಖ್ಯಾಬಲ ಹೊಂದಿದ ಗ್ರಾಪಂಗೆ ಅರ್ಜುನ್ ದೊಡಮನಿ ಅವರಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈ ಗ್ರಾಪಂಗೆ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ ಮುಖಂಡ ಕುಮಾರ ದೇಸಾಯಿ ಹೇಳಿದರು.
ಈ ಸಂದರ್ಭದಲ್ಲಿ ಮಹೇಶ ಮನಗೂಳಿ, ಮಲ್ಲು ಶಂಬೇವಾಡ, ಶಿವಪ್ಪ ಕರ್ಜಗಿ, ರಮೇಶ ಜಮಾದಾರ, ಕಾಜು ಬಂಕಲಗಿ ಸೇರಿದಂತೆ ಹಲವರು ಇದ್ದರು.