ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ
ರಾಣಿಬೆನ್ನೂರ 24: ತಾಲೂಕಿನ ಮಾಕನೂರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಂಜಪ್ಪ ಹನುಮಂತಪ್ಪ ಆರೇರ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಸಹದೇವಪ್ಪ ಹಲಗೇರಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ವಿಕ್ರಮ ಕುಲಕರ್ಣಿ ಘೋಷಣೆ ಮಾಡಿದರು.
ಸದಸ್ಯರಾಗಿ ಕರಬಸಪ್ಪ ಬಣಕಾರ, ಪರಮೇಶಪ್ಪ ಆಳ್ವಿ, ಶರಣಪ್ಪ ಬಾತಿ, ಶಾಂತವ್ವ ಹೊಸಕುರಬರ, ರತ್ನವ್ವ ಮುದಿಗೌಡ್ರ, ವೆಂಕಟೇಶ ಮೂಕಣ್ಣನವರ, ಹನುಮಂತಪ್ಪ ಚಳಗೇರಿ, ಬಸವಂತಪ್ಪ ಸಾರ್ಥಿ, ಬಸನಗೌಡ ಮಲ್ಲನಗೌಡ್ರ, ಬಸವರಾಜ ಹಲಗೇರಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸದಸ್ಯರು ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.