ಯರಗಟ್ಟಿ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ

ಲೋಕದರ್ಶನ ವರದಿ

ಯರಗಟ್ಟಿ 24: ಸಮೀಪದ ಮುನವಳ್ಳಿ ಪಟ್ಟಣದ ಜೆ.ಎಸ್.ಪಿ. ಸಂಘದ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ ಭೇಟಿ ನೀಡಿ ಮೊಟ್ಟೆ ಹಾಗೂ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ ಸದೃಢವಾದ ಆರೋಗ್ಯವನ್ನು ಹೊಂದಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಮೊಟ್ಟೆ ವಿತರಣೆ ಹಾಗೂ ಕ್ಷೀರಭಾಗ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಯಾಶಸ್ವಿಗೊಳಿಸಬೇಕು ಎಂದರು. ಸಿಆರ್ಪಿ ಮೀರಾ ಮುರನಾಳ, ಆರ್.ಬಿ.ಓಸಿ, ಮಲ್ಲಿಕಾರ್ಜುನ ಕಮತಗಿ, ಭಾರತಿ ಸಂದಿಮನಿ, ಅಣ್ಣಪ್ಪಗೌಡ ಶಾನಭೋಗ, ಚುಳಕಿಮಠ ಸೇರಿದಂತೆ ಇತರರು ಇದ್ದರು. ಕುಮಾರೇಶ್ವರ ವಿದ್ಯಾ ಮಂದಿರ, ಎಚ್.ಪಿ.ಎಸ್. ಗೊಂದಿ ಶಾಲೆಗೆ ಭೇಟಿ ನೀಡಿದರು. 

ಗಾಂಧಿನಗರ ಶಾಲೆ : ಪುರಸಭೆ ಸದಸ್ಯೆ ರೇವತಿ ಪಿ. ಬಾರಕೇರ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿ ತುಕ್ಕೋಜಿ, ಪ್ರಗು ಎಚ್.ಎಸ್.ಮನಿಯಾರ, ವೀರಣ್ಣ ಕೊಳಕಿ, ಸರೋಜಿನಿ ವಿಶ್ವಜ್ಞ, ರಜನಿ ನಾಯ್ಕ, ಹೇಮಾ ಹೊನ್ನಳ್ಳಿ, ಮಂಗಲಾ ಉಪ್ಪಾರಗುರು, ರೇಖಾ ಶಾನಭೋಗ, ಸುಧಾ ಶಾನಭೋಗ ಇತರರು ಇದ್ದರು 

ಸುದ್ದಿ ಓದಿ