ಶಿಗ್ಗಾವ್

ಬ್ಯಾಂಕ್ ಮೂಲಕ ಆರ್ಥಿಕ ಅಭಿವೃದ್ಧಿ ಉದ್ಯೋಗ ವೃದ್ಧಿಸಿಕೊಳ್ಳಿ: ಕಿರಣ

ಬ್ಯಾಂಕ್ ಮೂಲಕ ಆರ್ಥಿಕ  ಅಭಿವೃದ್ಧಿ ಉದ್ಯೋಗ ವೃದ್ಧಿಸಿಕೊಳ್ಳಿ:  ಕಿರಣ

ಲೋಕದರ್ಶನ ವರದಿ

ಶಿಗ್ಗಾವಿ 27:  ನಿಗದಿತ ಅವಧಿಯಲ್ಲಿಯೇ ಪಡೆದ ಸಾಲ ಮರುಪಾವತಿಸಿ ಬ್ಯಾಂಕ್ ಮೂಲಕ  ಆರ್ಥಿಕ ಅಭಿವೃದ್ಧಿ ಉದ್ಯೋಗ ವೃದ್ಧಿಸಿಕೊಳ್ಳಿ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕಿರಣ ಪಾಟೀಲ ಹೇಳಿದರು.

ಪಟ್ಟಣದ ಸಂತೆ ಮೈದಾನದ ಶಿಶುನಾಳ ಶರೀಫ ಸಭಾಭವನದಲ್ಲಿ ಪುರಸಭೆ ವ್ಯಾಪ್ತಿಯ ಸಣ್ಣ ಹಾಗೂ ಮದ್ಯಮ ವ್ಯವಹಾರಸ್ಥರು ವ್ಯಾಪಾರಿಗಳ ಸಾಲ ಸೌಲಭ್ಯತೆ ಹಾಗೂ ಬ್ಯಾಂಕ್ಗಳ ಸಹಕಾರ ಕುರಿತು ಸಂಕೀರ್ಣದಲ್ಲಿ ಮಾತನಾಡಿದ ಅವರು ಗ್ರಾಹಕರ ಮರುಪಾವತಿಯ ವಿಶ್ವಾರ್ಹತೆಯ ಮೇಲೆ ಬ್ಯಾಂಕಗಳಲ್ಲಿನ ಹಣಕಾಸು ವ್ಯವಹಾರಸ್ಥರಿಗೆ ಸಾಲರೂಪದಲ್ಲಿ ನೀಡಲಾಗುತ್ತದೆ. ಸರಕಾರವೂ ತನ್ನ ಪಾಲಿನ ಹಣವನ್ನು ಜನರ ಕಲ್ಯಾಣಕ್ಕಾಗಿ ಯೋಜನೆಗಳ ಸಹಾಯಧನದ ರೂಪದಲ್ಲಿ ನೀಡುತ್ತದೆ. 

ಗ್ರಾಹಕ ಸಾಲ ಪಡೆದ ನಂತರ ಮರುಪಾವತಿಯನ್ನೂ ಸರ್ಮಪಕ ರೀತಿಯಲ್ಲಿ ಹಾಗೂ ನಿಗಧಿತ ಸಮಯದಲ್ಲಿ ಮರುಪಾವತಿಸಿದಲ್ಲಿ ಇತರಿಗೂ ಬ್ಯಾಂಕ್ ಸೌಲಭ್ಯತೆ ವಿಸ್ತರಿಸಬಹುದು ಗ್ರಾಹಕರು ಕೇಂದ್ರ ಸಕರ್ಾರ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿದರದಲ್ಲಿ ನೀಡುವ ಕಿರು ಸಾಲಯೋಜನೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಸಲಹೆ ನೀಡಿದರು. ಪುರಸಭೆಯಲ್ಲಿ ವ್ಯಾಪಾರಸ್ಥರು ನೊಂದಾವಣೆಯ ಮೂಲಕ ಸಂಖ್ಯೆ ಪಡೆದಲ್ಲಿ ಪ್ರತ್ಯೇಕ ಕೌಂಟರನಲ್ಲಿ ಪಾವತಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು. ಸುಲಭ ಕಂತಿನಲ್ಲಿ ವ್ಯವಹಾರದ ಹಣ ಮರುಪಾವತಿಸಿದಲ್ಲಿ ಹೆಚ್ಚು ಸಂಕಷ್ಟದಿಂದ ಪಾರಾಗಬಹುದು ವೃತ್ತಿಯಲ್ಲೂ ನಷ್ಠ ತಪ್ಪಿಸಬಹುದು ಎಂದರು.

ಪುರಸಭೆ ಸದಸ್ಯ ಸುಭಾಸ್ ಚೌವ್ಹಾಣ ಮಾತನಾಡಿ ಹೂ ಮಾರಾಟಗಾರರು. ಬೀಡಿ ಅಂಗಡಿ ವ್ಯಾಪಾರಸ್ಥರು. ಬೀದಿ ಬದಿಯ ವ್ಯವಹಾರಸ್ಥರು. ಸಣ್ಣ ಬಂಡವಾಳದೊಂದಿಗೆ ವೃತ್ತಿ ಆರಂಭಿಸಿ ನಂತರ ದೊಡ್ಡಮೊತ್ತದ ಸಾಲಸೌಲಭ್ಯತೆ ಪಡೆದುಕೊಳ್ಳಬಹುದು. ಎಲ್ಲಿ ಸಮರ್ಪಕ ಸಾಲ ಮರುಪಾವತಿಯಾಗುವುದೋ ಅಲ್ಲಿ ಬ್ಯಾಂಕ್ ಇನ್ನಷ್ಟು ಸೌಲಭ್ಯತೆ ವಿಸ್ಥರಿಸುತ್ತದೆ. 

ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜಾಫರ್ ಪಠಾಣ, ಉಪಾಧ್ಯಕ್ಷರು, ಸದಸ್ಯರು. ಮುಖ್ಯಾಧಿಕಾರಿ ವೈ ಜಗಧೀಶ ಪಟ್ಟಣದ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ವ್ಯವಸ್ಥಾಪಕರು, ಸಣ್ಣಪುಟ್ಟ ಕಿರುಕುಳ ವ್ಯವಹಾರಸ್ಥರು. ವ್ಯಾಪಾರಿಗಳು ಪಾಲ್ಗೊಂಡಿದ್ದರು 

ಸುದ್ದಿ ಓದಿ