ದಸರಾ ಉತ್ಸವ ಮೂರ್ತಿ ಮೆರವಣಿಗೆ, ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರು
ರಾಣೆಬೆನ್ನೂರು 03: ದುರ್ಗಾ ವೃತ್ತದಲ್ಲಿ, ದಸರಾ ಉತ್ಸವ ಸಮಿತಿಯು ಪ್ರತಿವರ್ಷದಂತೆ ಈ ವರ್ಷವೂ ಸಹ, ದಸರಾ ಉತ್ಸವ ಮೂರ್ತಿಯ ಪ್ರತಿಷ್ಟಾಪನೆ ಮಾಡುವುದರ ಮೂಲಕ ಮಹಾಮಂಟಪದಲ್ಲಿ ಧರ್ಮ ಜಾಗೃತಿಯ ಸಂದೇಶ.ಬಿರುತ್ತಲಿದೆ. ಶುಕ್ರವಾರ ಸಂಜೆ ಬೆಳಗಾವಿಯಿಂದ ನಗರಕ್ಕೆ ಆಗಮಿಸಿದ ದೇವಿಯ ದೇವಿಯ ಭವ್ಯ ಆಕರ್ಷಕ ಉತ್ಸವ ಮೂರ್ತಿಯನ್ನು, ಭಕ್ತಿ ಭಾವದೊಂದಿಗೆ ಬರಮಾಡಿಕೊಂಡ ಪುರಜನರು, ನಂತರ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯು ಮಧ್ಯರಾತ್ರಿ ಜನತಾ ಬಜಾರ ಬಳಿಯ ಮಂಟಪದಲ್ಲಿ ಪ್ರತಿಷ್ಟಾಪನೆ ಗೊಳಿಸಲಾಯಿತು.5 ದಿವಸಗಳ ಕಾಲ, ನಿತ್ಯವೂ ಸಾವಿರಾರು ಭಕ್ತರಿಗೆ ತನ್ನ ದಿವ್ಯದರ್ಶನ ನೀಡುವಳು, ಸುಮಂಗಲಿಯರಿಗೆ ಆರಿಶಿಣ, ಕುಂಕುಮ ಮತ್ತು ಬಳೆ ವಿತರಿಸಿ, ಉಡಿ ತುಂಬುವ ಕಾರ್ಯ ನಡೆಯುತ್ತಲಿದೆ. ಮೆರವಣಿಗೆಗೆ, ವೀರಗಾಸೆ, ಸಮಾಳ, ಕರಡಿ ಮಜಲು, ಹಲಗೆ, ಘಂಟಾನಾದ ಕೋಲು ಕುಣಿತ, ಜನಪದ ನೃತ್ಯ, ಡೊಳ್ಳು ಕುಣಿತ ವಿಶೇಷ ಮೆರಗು ನೀಡಿದ್ದವು. ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡು ತಮ್ಮ ಸೇವಾ ಕಾರ್ಯ ಮೆರೆದರು