ಶೌಚಾಲಯದ ಜಾಗೃತಿ ಮೂಡಿಸುವ ಸ್ವಚ್ಛತಾ ರಥಕ್ಕೆ ಚಾಲನೆ
ಬಳ್ಳಾರಿ19: ವಿಶ್ವ ಶೌಚಾಲಯದ ದಿನಾಚರಣೆ ಅಂಗವಾಗಿ ಜಿಪಂ ವತಿಯಿಂದ ಸಿದ್ದಪಡಿಸಲಾಗಿರುವ ಶೌಚಾಲಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸ್ವಚ್ಛತಾ ರಥಕ್ಕೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ ಅವರು ಜಿಪಂ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು.
ಈ ರಥವು ಜಿಲ್ಲೆಯಾದ್ಯಂತ ಸಂಚರಿಸಿ ಶೌಚಾಲಯದ ಮಹತ್ವದ ಕುರಿತಂತೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲಿದೆ. ಈ ಕುರಿತು ಕರಪತ್ರಗಳನ್ನು ವಿತರಿಸಲಾಗುತ್ತದೆ ಮತ್ತು ಧ್ವನಿವರ್ಧಕದ ಮೂಲವು ಜಾಗೃತಿ ಮೂಡಿಸಲಾಗುತ್ತದೆ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಸಚಿವರ ಗಮನಕ್ಕೆ ತಂದರು.
ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಅನಂದಸಿಂಗ್, ಗಣೇಶ,ತುಕರಾಂ,ಪಿ.ಟಿ.ಪರಮೇಶ್ವರ ನಾಯಕ್, ಕೆ.ಸಿ.ಕೊಂಡಯ್ಯ, ಅಲ್ಲಂವೀರಭದ್ರಪ್ಪ, ಶರಣಪ್ಪ ಮಟ್ಟೂರು,ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಅರುಣ ರಂಗರಾಜನ್,ಪ್ರೊಬೆಷನರಿ ಐಎಎಸ್ ನಂದಿನಿ ಸೇರಿದಂತೆ ಅನೇಕರು ಇದ್ದರು.