ತಾಳಿಕೋಟಿ

ಬಾವೂರ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಬಾವೂರ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ತಾಳಿಕೋಟಿ: ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿರುವ ಕ್ರೀಡೆಗಳು ಇಂದು ರಾಜ್ಯ, ದೇಶ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಅವುಗಳನ್ನು ರಕ್ಷಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ  ಅಧಿಕಾರಿ ಬಿ. ಆರ್. ಬಿರಾದಾರ ತಿಳಿಸಿದರು. 

ಸಮೀಪದ ಬಾವೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪೂರ, ತಾಲೂಕ ಪಂಚಾಯತ ತಾಳಿಕೋಟಿ ಹಾಗೂ ಗ್ರಾಮ ಪಂಚಾಯತ್ ಬಾವೂರ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ಇಲಾಖೆ ವತಿಯಿಂದ ನಡೆಯುವ ಗ್ರಾಮೀಣ ಕ್ರೀಡಾಕೂಟ 2022-23 ನ್ನು ಉದ್ಘಾಟಿಸಿ ಮಾತನಾಡಿದರು. 

ಬಾವೂರ ಗ್ರಾಮ ಪಂಚಾಯತ ವ್ಯಾಪ್ತಿಗೊಳಪಡುವ ಗ್ರಾಮಗಳಾದ ಹೊನ್ನಳಿ, ಕೂಚಬಾಳ, ಲಿಂಗದಳ್ಳಿ, ಹಾಗೂ ಬಾವೂರ ಗ್ರಾಮಗಳ ಗ್ರಾಮೀಣ ಕಬಡ್ಡಿ ಕ್ರೀಡಾಪಟುಗಳು ಈ ಸ್ಪರ್ಧೆ ಯಲ್ಲಿ ಬಾಗವಹಿಸಿದ್ಧರು.  

ಬಾವೂರ ಗ್ರಾಮ ಪಂಚಾಯತ ಅಧ್ಯಕ್ಷ ಸೋಮು ಕಾಮರಡ್ಡಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಶಂಕರ ತಳವಾರ, ಪಂಚಾಯತ ಸರ್ವ ಸದಸ್ಯರು, ತಾ.ಪಂ.ಸಿಬ್ಬಂದಿಗಳು, ಹಾಗೂ ಗ್ರಾಮದ ಗಣ್ಯರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ