ಮಕ್ಕಳನ್ನೇ ಬಹುದೊಡ್ಡ ಆಸ್ತಿಯನ್ನಾಗಿ ಮಾಡಿ ಡಾ.ಬಿ.ಕೆ.ಶ್ರೀನಿವಾಸ ಮೂತರ್ಿ

ಮಕ್ಕಳನ್ನೇ ಬಹುದೊಡ್ಡ ಆಸ್ತಿಯನ್ನಾಗಿ ಮಾಡಿ ಡಾ.ಬಿ.ಕೆ.ಶ್ರೀನಿವಾಸ ಮೂತರ್ಿ

ಬಳ್ಳಾರಿ 31:ಭಗವಂತನ ಸ್ಮರಣೆಯಿಂದ ಎದುರಾಗುವ ಎಲ್ಲ ಸಮಸ್ಯೆಗಳು ದೂರವಾಗಲಿವೆ ಎಂದು ಶ್ರೀರಾಘವೇಂಧ್ರಾನುಗ್ರಹ ಪ್ರಶಸ್ತಿ ಪುರಸ್ಕೃತ ಡಾ.ಬಿ.ಕೆ.ಶ್ರೀನಿವಾಸ ಮೂತರ್ಿ ಹೇಳಿದರು. ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಮಧ್ವ ಸಂಘದ ಆವರಣದಲ್ಲಿ ಶ್ರೀಪುರುಂದರ ದಾಸರ ಹಾಗೂ ಶ್ರೀಮಧ್ವ ನವರಾತ್ರೋತ್ಸವಗಳ ಆಚರಣೆ ನಿಮಿತ್ತ ಜ.27ರಿಂದ ಫೆ.14ರವರೆಗೆ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. 

ದೇವರು ನಮಗೇನು ಮಾಡಿಲ್ಲ ಎನ್ನುವುದು ಮುಖ್ಯವಲ್ಲ, ದೇವರಿಗೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ. ದೇವರು ಎಲ್ಲರಿಗೂ ಸರಿಸಮಾನವಾಗಿ ಎಲ್ಲವನ್ನೂ ಕರುಣಿಸುತ್ತಾನೆ. ಇದರಲ್ಲಿ ದೇವರು ಎಂದಿಗೂ ಬೇಧಭಾವ ಮಾಡೋಲ್ಲ. ಪ್ರತಿಯೋಬ್ಬರಿಗೂ ಭಗವಂತ ಒಳ್ಳೆಯ ಅವಕಾಶವನ್ನು ನೀಡುತ್ತಾನೆ. ಆದರೇ, ಅದನ್ನು ಉಳಿಸಿಕೊಳ್ಳುವುದು, ಬಿಡುವುದು ನಮಗೆ ಬಿಟ್ಟಿದ್ದು. ನಮ್ಮ ನಿರ್ಲಕ್ಷ್ಯತನದಿಂದ, ನಮ್ಮ ಬೇಜವಾಬ್ದಾರಿತನದಿಂದ ದೇವರು ನೀಡಿದ್ದನ್ನು, ಕೊಟ್ಟ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳದಿದ್ದರೇ, ಅದು ನಮ್ಮ ದುರದೃಷ್ಟ. ಅದಕ್ಕೆ ದೇವರನ್ನು ಯಾರೂ ನಿಂದಿಸಕೂಡದು, ಪ್ರತಿಯೋಬ್ಬರೂ ಭಗವಂತ ಆಡಿಸುವ ಗೊಂಬೆಗಳು ನಾವು ಎಂದರು. ಶಿಕ್ಷಣವಿಲ್ಲದಿದ್ದರೇ ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡಲು ಕಷ್ಟವಾಗಲಿದೆ. ಮಕ್ಕಳಿಗಾಗಿ ಶ್ರಮಪಟ್ಟು ಪಾಲಕರು ಆಸ್ತಿ ಮಾಡುವದಕ್ಕಿಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ, ಮಕ್ಕಳನ್ನೇ ಬಹುದೊಡ್ಡ ಆಸ್ತಿಯನ್ನಾಗಿ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ಮಕ್ಕಳ ಶಿಕ್ಷಣಕ್ಕಾಗಿ ಸಕರ್ಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಸಕರ್ಾರದ ಸೌಲಭ್ಯಗಳನ್ನು ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಪಾಲಕರು ಮುಂದಾಗಬೇಕು. ಪ್ರತಿಯೋಬ್ಬ ಮಕ್ಕಳೂ ಸಮಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಕಳೆದು ಹೋದ ಸಮಯ ಮತ್ತೆ ಬರೋಲ್ಲ, ಈ ಹಿನ್ನೆಲೆಯಲ್ಲಿ ಇರುವ ಅಮುಲ್ಯವಾದ ಸಮಯವನ್ನು ಹಾಳು ಮಾಡಕೂಡದು. ಮೊಬೈಲ್, ವ್ಯಾಟ್ಸ್ಅಪ್, ಫೇಸ್ಬುಕ್ ಎಂದು ಮಕ್ಕಳು ಸಮಯ ಹಾಳುವ ಮಾಡುವ ಬದಲು, ಪ್ರತಿಯೋಬ್ಬರೂ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಲಕರ, ಕಲಿಸಿದ ಗುರುಗಳ ಹಾಗೂ ಶಾಲೆ, ಜಿಲ್ಲೆಯ ಕೀತರ್ಿಯನ್ನು ಮಕ್ಕಳು ಹೆಚ್ಚಿಸಬೇಕು ಎಂದರು. ಸಂಸ್ಕೃತ ನಿವೃತ್ತ ಉಪನ್ಯಾಸಕ ವಿದ್ವಾನ್ ಎಂ.ಗೋವಿಂದ ಭಟ್ ಅವರು ಮಾತನಾಡಿ, ಕಾರ್ಯಕ್ರಮಗಳಲ್ಲಿ ಪ್ರತಿಯೋಬ್ಬರೂ ಭಾಗವಹಿಸಿ, ಶ್ರೀಹರಿವಾಯು ಗುರುಗಳ ಅನುಗ್ರಹ ಪಡೆದುಕೊಳ್ಳಬಹುದು. ವಿವಿಧ ಪಂಡಿತರಿಂದ, ವಿದ್ವಾಂಸರಿಂದ ಫೆ.14ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಗರ ಸೇರಿದಂತೆ ಎಲ್ಲ ಭಕ್ತರು ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬಹುದು ಎಂದರು. ಬದರಿನಾರಾಯಣ ದೇವಾಲಯದ ವಿದ್ವಾನ್ ಸತ್ಯನಾರಾಯಣ ಆಚಾರ್ ಜೋಶಿ ಹಾಗೂ ಶ್ರೀಮಧ್ವ ಸಂಘದ ಅಧ್ಯಕ್ಷ ಬಿಸಲಹಳ್ಳಿ ರಾಮಮೂತರ್ಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಮಧ್ವ ಸಂಘದ ಕಾರ್ಯದಶರ್ಿ ಸುಶಿಲೇಂದ್ರ, ಖಜಾಂಚಿ ಸಿ.ಸುಬ್ರಹ್ಮಣ್ಯ, ಸಹ ಕಾರ್ಯದಶರ್ಿಗಳಾದ ಸಿ.ಜೆ.ಪ್ರಭಂಜನ್ ದಾಸ, ಪಿ.ಲಕ್ಷ್ಮಣ್ ಸೇರಿದಂತೆ ವಿವಿಧ ಪಂಡಿತರು, ಸಮೀತಿ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ