ಡಾ. ಉದ್ದಣ್ಣಾ ಗೋಡೇರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ
ಗೋಕಾಕ14: ಇತ್ತೀಚೆಗೆ ಹಂಪಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗೋಕಾಕದ ಜಾನಪದ ದಟ್ಟಿ ಕುಣಿತ ಕಲಾವಿದ ಡಾ. ಉದ್ದಣ್ಣಾ ಗೋಡೇರ್ ಅವರಿಗೆ ಪ್ರತಿಷ್ಠಿತ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.
ಹೇಮಕೂಟ ಶೂನ್ಯ ಸಿಂಹಾಸನ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹಂಪಿಯಲ್ಲಿ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಮಾತಾ ಪ್ರಕಾಶನ ಕರ್ನಾಟಕ ಹಾಗೂ ದಿ.ಜರ್ನಿ ಆಫ್ ಸೊಸೈಟಿ ದೆಹಲಿ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಜಾನಪದ ಸೇವೆಯಲ್ಲಿನ ಸಾಧನೆಯನ್ನು ಗಮನಿಸಿ ಗೋಕಾಕ ತಾಲೂಕ ಕನ್ನಡ ಜಾನಪದ ಸಂಸ್ಥೇಯ ಅಧ್ಯಕ್ಷ ಡಾ. ಉದ್ದಣ್ಣಾ ಗೋಡೆರ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮನಿಪ್ರಸ್ವ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಉದ್ಘಾಟನೆಯನ್ನು ಚನ್ನಮಲ್ಲಪ್ಪ ಮೆಣಸಿನಕಾಯಿ ಇವರು ನೆರವೇರಿಸಿದರು. ವೆಂಕಟೇಶ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪವಾಡೆಪ್ಪ ವಮುನ್ಯಾಳ, ಶಿವಶಂಕರಪ್ಪ ಹಂಚಿನಾಳ, ಡಾ. ಮಂಜೇಗೌಡ, ಡಾ. ಧರ್ಮನಗೌಡ, ಡಾ. ಶಿವರಾಜಗೌಡ, ಸೋಮಶೇಖರ್ ಟಿ ವಹಿಸಿದ್ದರು. ಮಂಜುಳಾ ಪಾವಗಡ ಸ್ವಾಗತ ಕೋರಿದರು. ಮಧು ಪಿ. ವಂದನಾರ್ಪಣೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಡಾ. ನಾಗರಾಜ ತಂಬ್ರಹಳ್ಳಿ ಉಪಸ್ಥಿತರಿದ್ದರು
ಪ್ರಶಸ್ತಿ ಪಡೆದ ಡಾ. ಉದ್ದಣ್ಣಾ ಗೋಡೇರ್ ಅವರಿಗೆ ಗೋಕಾವಿ ಗೆಳೆಯರ ಬಳಗ, ಕನ್ನಡ ಜಾನಪದ ಪರಿಷತ್ತು, ಬಿಂದು ಸಂಸ್ಥೆ, ಸರ್ವೇಶ್ವರ ಜಾನಪದ ಕಲಾ ಬಳಗ, ಹಿರಿಯ ರಂಗಕಮರ್ಿ ಈಶ್ವರಚಂದ್ರ ಬೆಟಗೇರಿ, ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ, ಸಾಹಿತಿ ಕಲಾವಿದ ಪ್ರಾಧ್ಯಾಪಕ ಜಯಾನಂದ ಮಾದರ, ಡಾ. ಅರುಣ ಸವತಿಕಾಯಿ, ಹಿರಿಯ ನ್ಯಾಯವಾದಿ ಎಮ್, ಎನ್. ಚೋಟೆಪ್ಪಗೋಳ ಅಭಿನಂದಿಸಿದ್ದಾರೆ.