ಡಾ . ಶಿವನಗೌಡ ಟಿ ಅವರಿಗೆ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ
ಡಾ . ಶಿವನಗೌಡ ಟಿ ಅವರಿಗೆ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ
ಹೂವಿನಹಡಗಲಿ 16: ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಕಲಾಗ್ರಾಮ ಸಭಾಂಗಣದಲ್ಲಿ ಈಚೆಗೆ ನಡೆದ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿ ಹಾಗೂ ವಂಶಪಾರಂಪರ್ಯ ವೈದ್ಯಕೀಯ ವೃತ್ತಿ ಪ್ರಶಸ್ತಿಯನ್ನು ತಾಲೂಕಿನ ಬೂದನೂರು ಗ್ರಾಮದ ಹಿರಿಯ ವಂಶಪಾರಂಪರೆ ವೈದ್ಯರಾದ ಡಾ.ಶಿವಗೌಡ ಟಿ .ರವರಿಗೆ ನೀಡಿ ಗೌರವಿಸಲಾಯಿತು. ಡಾ. ಶಿವನಗೌಡ ಅವರು ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಹಾಗೂ ಅತ್ಯುತ್ತಮ ಸೇವೆಗೆ ಪ್ರಶಸ್ತಿ ಲಭಿಸಿದೆ.ಇದೀಗ ಹಿರೇಹಡಗಲಿ ಡಾ.ವಿನೋದ್ ರವರ ಮಾರ್ಗದರ್ಶನದಲ್ಲಿ ಹಿರೇಹಡಗಲಿ ಗ್ರಾಮದ ಶ್ರೀ ಬೆಟ್ಟದ ಮಲ್ಲಿಕಾರ್ಜುನ ಕ್ಲಿನಿಕ್ ನಲ್ಲಿ.ಸಹಾಯಕ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರ. ಇದೇ ವೇಳೆ ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ.. ಮನೋವೈದ್ಯ. ಸಿ. ಎನ್.ಚಂದ್ರಶೇಖರ್. ಸಂಸದ ಡಾ.ಮಂಜುನಾಥ. ಡಾ.ಅಂಜಿನಪ್ಪ.ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ದಯಾನಂದ ಎಂ. . ಉಪಾದ್ಯಕ್ಷ.ಸುರೇಶ ಹಲಗಿ.ಪ್ರದಾನಕಾರ್ಯದರ್ಶಿ.ರಮೇಶ್.ಕಾರ್ಯದರ್ಶಿ ಗಂಗಾಧರ್ ಇದ್ದರು.