ಮಕ್ಕಳ ಮಾನಸಿಕ ಒತ್ತಡಕ್ಕೆ ಒಳಗಾಗದಿರಿ: ಪಾಟೀಲ
ಮಮದಾಪೂರ05: ಇಂದು ಪಾಲಕರನ್ನೊಳಗೊಂಡು ಮಕ್ಕಳು ಒತ್ತಡಕ್ಕೊಳಗಾಗುತ್ತಿರುವುದು ಒಂದು ಕಳವಳದ ಸಂಗತಿಯಾಗಿದೆ. ಇಂದು ಮೋಬೈಲ್ ಬಳಕೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಆರ್ಥಿಕ ತೊಂದರೆ, ಗಂಡು ಹೆಣ್ಣು ತಾರತಮ್ಯ, ಕುಟುಂಬದಲ್ಲಿ ಬಂದೊದಗುವ ಅನುವು ಆಪತ್ತುಗಳ, ಪಾಲಕರ ಅತಿಯಾದ ನಿಸ್ಕಾಳಜಿ ಹೀಗೆ ಹತ್ತು ಹಲವಾರು ಅಂಶಗಳು ಮಕ್ಕಳು ಒತ್ತಡಕ್ಕೊಳಗಾಗಲು ಕಾರಣಗಳಾಗಿವೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿಕ್ಷಣ ಸಂಯೋಜಕ ಎನ್. ಆರ್ ಪಾಟೀಲರು ಹೇಳಿದರು.
ಗೋಕಾಕ ತಾಲೂಕಿನ ಮಮದಾಪೂರ ಸಮೀಪದ ಮರಡಿ ಶಿವಾಪೂರ ಕ್ರಾಸ್ (ಎಮ್ಮಿಯವರ ಗುಂಡ) ನ ಹತ್ತಿರ ಶ್ರೀ ಕೆಂಚಪ್ಪ ಮಾಳಕನವರ ಮನೆಯ ಆವರಣದಲ್ಲಿ ಮಮದಾಪೂರ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯದಲ್ಲಿ ಪಾಕ್ಷಿಕ ಜ್ಞಾನಾಕ್ಷಯ ಚಿಂತಕರ ಚಾವಡಿ 20ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿದ್ಯಾಥರ್ಿಗಳನ್ನು ಕುರಿತು ಮಾತನಾಡುತ್ತ ಸ್ವಾಮಿ ವಿವೇಕಾನಂದ, ಅರುನಿಮಾ ಸಿನ್ಹಾರಂತಹ ಸಾಧಕರ ಜೀವನವನ್ನು ಅರಿತುದುಶ್ಚಟಗಳಿಂದ ಮುಕ್ತರಾಗಿ ವ್ಯಾಯಾಮ, ಸಾತ್ವಿಕ ಆಹಾರ ಹಾಗೂ ಶಾಂತ ಮನಸ್ಸಿನಿಂದ ವಿದ್ಯಾರ್ಥಿ ಜೀವನವನ್ನು ಸಾಗಿಸುವಂತವರಾಗಿ, ಪಾಲಕರಾದವರೂ ಕೂಡ ಮಕ್ಕಳ ದಿನನಿತ್ಯದ ಚಟುವಟಿಕೆಗಳ ಬಗ್ಗೆ ನಿಗಾವಹಿಸುವಂತೆ ಕಿವಿಮಾತು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ ಮರಡಿ ಶಿವಾಪೂರ ಕ್ರಾಸ್ ನ ಹಿರಿಯರಾದ ನಿರುಪಾದಿ. ಸಿ ಎಮ್ಮಿಯವರು ಚಿಂತಕರ ಚಾವಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ, ಇಂದಿನ ಯುವ-ಜನಾಂಗ ಆದರ ತೋರುವ ಗೌರವ ನೀಡುವ ಸಂಸ್ಕೃತಿಯನ್ನು ಕಳೆದುಕೊಂಡಿದೆ. ಇಂದಿನ ಮಕ್ಕಳು ಎಲ್ಲಿಯವರೆಗೆ ಜನ್ಮದಾತರನ್ನ, ಗುರುಗಳನ್ನ, ಹಿರಿಯರನ್ನ ಗೌರವದಿಂದ ಕಾಣುವುದಿಲ್ಲವೋ ಅಲ್ಲಿಯವರೆಗೆ ಸಾಧನಾ ಮೆಟ್ಟಿಲನ್ನು ಏರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮರಡಿ ಶಿವಾಪೂರ ಕ್ರಾಸ್ ನ ದೇವಪ್ಪ ಕುರುಬಗಟ್ಟಿ, ಶಿವಪ್ಪ ಎಮ್ಮಿ, ಕೆಂಚಪ್ಪ ಎಮ್ಮಿ ಉಪಸ್ಥಿತರಿದ್ದರು.
ಆರಂಭದಲ್ಲಿ ಗಂಗವ್ವ ಗೋಪಾಳಿ ಮತ್ತು ಗದಿಗೆವ್ವ ಕುರುಬಗಟ್ಟಿ ಶುಶ್ರಾವ್ಯವಾಗಿ ವಿಜ್ಞಾನ ಗೀತೆ ಹಾಡಿದರು. ಪವಿತ್ರಾ ಮಾಳಕನವರ ಸರ್ವರನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ಮಮದಾಪೂರದ ಚಿಂತಾಮಣಿ ಪಾವಟೆ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯದ ಸಂಚಾಲಕ ರ. ವೀ ದೇಮಶೆಟ್ಟಿಯವರು ವಂದಿಸಿದರು. ಪವಿತ್ರಾ ಕುರುಬಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಲಕ್ಷ್ಮೀ ಮಲ್ಲಾಡಿ ಕೂಡಲ ಸಂಗಮನವರ ವಚನವನ್ನು ವಾಚಿಸಿದರು