ವಿಜಯಪುರ

ಜಿಲ್ಲಾ ಕೆಡಿಪಿ ಸದಸ್ಯ ಸತೀಶ ಅಡವಿಗೆ ಸನ್ಮಾನ

ಜಿಲ್ಲಾ ಕೆಡಿಪಿ ಸದಸ್ಯ ಸತೀಶ ಅಡವಿಗೆ ಸನ್ಮಾನ

 ದೇವರಹಿಪ್ಪರಗಿ 21: ವಿಜಯಪುರ ಜಿಲ್ಲಾ ಕೆಡಿಪಿ ನೂತನ ಸದಸ್ಯರಾಗಿ ಸತೀಶ ಅಡವಿ ಅವರನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಗುರುನಾಥ ಮಾಸ್ತರ ಮುರಡಿ ಸನ್ಮಾನಿಸಿ ಗೌರವಿಸಿದರು.  ನಂತರ ಮಾತನಾಡಿ, ಸಮಾಜದ ಮುಖಂಡರನ್ನು ಕೆಡಿಪಿ ಸದಸ್ಯರಾಗಿ ಆಯ್ಕೆ ಮಾಡಿದ್ದಕ್ಕೆ ಸಮುದಾಯದ ಪರವಾಗಿ ಧನ್ಯವಾದಗಳು ತಿಳಿಸಿದರು. ಅವಕಾಶ ಸಿಕ್ಕಾಗ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಸರ್ಕಾರದಿಂದ ಸಹಾಯ ಸೌಲತ್ತುಗಳನ್ನು ಒದಗಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಬೇಕು ಎಂದು ತಿಳಿಸಿದರು. ಮಾಜಿ ಯೋಧ ಚಂದ್ರಾಮ ಪೂಜಾರಿ, ಹಿರಿಯ ಕಲಾವಿದರಾದ ಮಾರುತಿ ಶಿವಣಗಿ, ಮುಖಂಡರುಗಳಾದ ಅಮೋಗಿ ಕಗ್ಗೋಡ, ಮಾಡ್ಡಪ್ಪ ಸಾತಿಹಾಳ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ