ಗ್ರಾಮೀಣ ರೈತರಿಗೆ ಸೂಪ್ಪಿ ಕತ್ತರಿಸುವ ಯಂತ್ರ ವಿತರಣೆ
ರಾಣೆಬೆನ್ನೂರು 05: ಗ್ರಾಮೀಣ ಪ್ರದೇಶದ ರೈತರು, ಸಹಕರಿಸಿ ಅಭಿವೃದ್ಧಿಯ ಜೊತೆಗೆ ಆರ್ಥಿಕ ಅಭಿವೃದ್ಧಿ ಹೊಂದಲು ಸಹಾಯಧನದ ಯಂತ್ರಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಲು ಮುಂದಾಗಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ನರಸಗೊಂಡರ ಹೇಳಿದರು. ಅವರು ಇಲ್ಲಿನ ಪಶು ಆಸ್ಪತ್ರೆ ಆವರಣದಲ್ಲಿ ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿ ರೈತರಿಗೆ ಸೂಪ್ಪಿ ಕತ್ತರಿಸುವ ಕೃಷಿ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಕೃಷಿ ಪ್ರಧಾನ ದೇಶದಲ್ಲಿ, ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ರೀತಿಯ ಆಧುನಿಕ ತಂತ್ರಜ್ಞಾನ ಹೊಂದಿದ ಯಂತ್ರಗಳನ್ನು ಹೊರತಂದಿದೆ, ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡು ಪುನಹ ಬೇರೆಯವರಿಗೂ ಸಹ ಅದರ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿಕೊಳ್ಳಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠದ ಅಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ, ನ. ಯೋ. ಪ್ರಾ. ಸದಸ್ಯ ಬಸವರಾಜ ಚಿಮ್ಮಲಗಿ, ಡಾ: ದಿವಾಕರ ನಾಡಿಗೇರ್, ಕರಿಬಸಪ್ಪ ಹಾದಿಮನಿ ಮತ್ತು ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.