ಬ್ಯಾಡ್ಗಿ

ವಿಕಲಚೇತನ ಫಲಾನುಭವಿಗಳಿಗೆ ಯಂತ್ರ ಚಾಲಿತ ವಾಹನ ವಿತರಣೆ

ವಿಕಲಚೇತನ ಫಲಾನುಭವಿಗಳಿಗೆ ಯಂತ್ರ ಚಾಲಿತ ವಾಹನ ವಿತರಣೆ

ಬ್ಯಾಡಗಿ 20: ಅಂಗವಿಕಲತೆ ಅಥವಾ ವಿಕಲಾಂಗತಿ ಎಂಬುವುದು ಯಾವುದೇ ಶಾಪದಿಂದ ಬರುವಂತದ್ದಲ್ಲ ಅಂತಹ ಅಂಗವೈಕಲ್ಯತೆ ಹೊಂದಿದ ಮಕ್ಕಳಲ್ಲಿಯೇ ಅತ್ಯಂತ ಆತ್ಮವಿಶ್ವಾಸ ಇರುವುದು ಕಾಣಬಹುದಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.

ಶುಕ್ರವಾರ ಇಲ್ಲಿನ ತಾಲೂಕ ಪಂಚಾಯತ ಸಭಾಭವನದಲ್ಲಿ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಆರು ಜನ ವಿಕಲಚೇತನ ಫಲಾನುಭವಿಗಳಿಗೆ ಯಂತ್ರ ಚಾಲಿತ ವಾಹನಗಳನ್ನು ವಿತರಿಸಿ ಮಾತನಾಡಿದ ಅವರು, ವಿಕಲಚೇತರು ಪ್ರತಿಯೊಂದು ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಮಾಡುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದೆ. ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸದೇ ಅವಕಾಶವನ್ನು ಕೊಟ್ಟಾಗ ಮಾತ್ರ ಅವರಲ್ಲಿನ ಸೂಪ್ತ ಪ್ರತಿಭೆ ಬೆಳಕಿಗೆ ಬರುವ ಸಾಧ್ಯವಾಗುತ್ತದೆ ಎಂದರಲ್ಲದೇ, ವಿಕಲಾಂಗರು ಅಧೈರ್ಯಕ್ಕೆ ಒಳಗಾಗದೆ ಸರ್ಕಾರದಿಂದ ಹಾಗೂ ಹಲವು ವಿಕಲಚೇತನ ಸಂಘ ಸಂಸ್ಥೆಗಳ ನೆರವಿನಿಂದ ತರಬೇತಿ ಪಡೆದುಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕಲು ಮುಂದಾಗಬೇಕೆಂದು ಕರೆ ನೀಡಿದರು.ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾಧಿಕಾರಿ ಆಶು ನದಾಫ್ ಮಾತನಾಡಿ, ಶೇ 75 ರಷ್ಟು ಮೇಲ್ಪಟ್ಟ ಅಶಕ್ತ ವಿಕಲಚೇತನರಿಗೆ ಸ್ವಉದ್ಯೋಗ ಕೈಗೊಳ್ಳಲು ಹಾಗೂ ಇತರರಿಗೆ ಹೊರೆಯಾಗದಂತೆ ಸ್ವಾವಲಂಬಿ ಜೀವನ ನಡೆಸುವ ಸದುದ್ದೇಶದಿಂದ ಸರ್ಕಾರ ಅಂತವರಿಗೆ ಯಂತ್ರ ಚಾಲಿತ ವಾಹನಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ವಿಕಲಚೇತನರು ಪಡೆದುಕೊಂಡು ಆರ್ಥಿಕವಾಗಿ ಸದೃಡತೆಯನ್ನು ಸಾಧಿಸಲು ಮುಂದಾಗಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಮಾಸಣಗಿ ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ ಬಣಕಾರ, ತಾಬಿಜೆಪಿ ಅಧ್ಯಕ್ಷ ಹಾಲೇಶ ಜಾಧವ, ಮುಖಂಡರಾದ ಶಿವಬಸಪ್ಪ ಕುಳೇನೂರ, ಶಿವಯೋಗಿ ಉಕ್ಕುಂದ, ವಿಕಲಚೇತನರ ಸಂಘದ ಅಧ್ಯಕ್ಷ ಪಾಂಡುರಂಗ ಸುತಾರ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಎನ್.ತಿಮ್ಮಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕಾ ಸಂಯೋಜಕ ನಾಗರಾಜ ಬಿಸಲಹಳ್ಳಿ ಸ್ವಾಗತಿಸಿದರು ಅರವಿಂದ ವಂದಿಸಿದರು 

ಸುದ್ದಿ ಓದಿ