ಗೋವುಗಳ ಬಾಯಾರಿಕೆ ನೀಗಿಸಲು ನೀರಿನ ತೊಟ್ಟಿ, ಸ್ವಚ್ಚತೆಗಾಗಿ ಕಸದಬುಟ್ಟಿ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 31: ನಗರದ 18ನೇ ವಾಡರ್ಿನಲ್ಲಿ ನೀರಿಗಾಗಿ ಬಾಯಾರಿಸಿದ ಗೋವುಗಳಿಗೆ ನೀರಿನ ತೊಟ್ಟಿ ಮತ್ತು ಸ್ವಚ್ಚತೆಗಾಗಿ ಕಸದಬುಟ್ಟಿ ಸಂಗ್ರಹಣೆಗೆ ಮನೆ-ಮನೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ಬಿಜೆಪಿ ಯುವಮೊರ್ಚ ನಗರ ಘಟಕದ ಅಧ್ಯಕ್ಷ ಕೆ.ಎಸ್ ಅಶೋಕ ಕುಮಾರ, ಮತ್ತು ಕೆ.ಎಸ್ ದಿವಾಕರ್ ವಿತರಿಸಿದರು. ನಗರದ ಸತ್ಯನಾರಾಯಣ ಪೇಟೆಯಲ್ಲಿ ಭಾನುವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ನಗರ ಸ್ವಚ್ಚತೆಗಾಗಿ ಆದ್ಯತೆ ನೀಡಿ ಮನೆ-ಮನೆಯಲ್ಲಿ ಕಸ ಸಂಗ್ರಹಿಸಲು ವಾಡರ್ಿನ ಪ್ರತೀ ಮನೆ-ಮನೆಗೆ ಸುಮಾರು 2800 ಪುಟ್ಟಿಗಳನ್ನು ವಿತರಿಸಲಾಯಿತು. ಅಲ್ಲದೇ ಸತ್ಯನಾರಾಯಣ ಪೇಟೆಯಲ್ಲಿ ನೂರಾರು ಜಾನುವಾರುಗಳು ಬೀದಿಯಲ್ಲಿ ಒಡಾಡುತ್ತಿವೆ ಅವುಗಳ ಬಾಯಾರಿಕೆಯಿಂದ ಇರಬಾರದೆಂದು 48 ಸ್ಥಳಗಳಲ್ಲಿ ನೀರಿನ ತೊಟ್ಟಿ ಇರಿಸಿ ಅವುಗಳಿಗೆ ದಿನನಿತ್ಯ ನೀರು ಸರಬರಾಜು ಮಾಡಲಾಗುತ್ತದೆ ಎಂದರು. ಇನ್ನು ಸಂಕ್ರಾಂತಿ ಅಂಗವಾಗಿ ಈ ವಾಡರ್ಿನ ಮಹಿಳೆಯರಿಗೆ ರಂಗೋಲಿ ಸ್ಪಧರ್ೆಯನ್ನು ಜ.13ರಂದು ಬೆಳಿಗ್ಗೆ ಎಸ್.ಎನ್.ಪೇಟೆಯ ಮೊದಲನೇ ಕ್ರಾಸ್ನಲ್ಲಿ ಹಮ್ಮಿಕೊಂಡಿದ್ದು. ಇದರಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆಲ್ಲಾ ನೆನಪಿನ ಕಾಣಿಕೆ ನೀಡಲಾಗುತ್ತದೆ. ಜೊತೆಗೆ ಈ ಸ್ಪಧರ್ೆಯಲ್ಲಿ ಗೆದ್ದವರಿಗೆ ಮೊದಲನೇ ಬಹುಮಾನ ಫ್ರಿಡ್ಜ, ಎರಡನೇ ಬಹುಮಾನ ವಾಷಿಂಗ್ಮಿಷೆನ್, ಮೂರನೇ ಬಹುಮಾನ ರುಬ್ಬುವ ಗ್ರೈಂಡರ್ ಇನ್ನಿತರ 12 ಸ್ಥಾನಗಳನ್ನು ಪಡೆದವರಿಗೆ ಮಿಕ್ಸಿ ಯನ್ನು ಬಹುಮಾನವಾಗಿ ವಿತರಿಸಲಾಗುತ್ತದೆ ಎಂದು ಬಿಜೆಪಿ ಯುವಮೊರ್ಚ ನಗರ ಘಟಕದ ಅಧ್ಯಕ್ಷ ಕೆ.ಎಸ್ ಅಶೋಕ ಕುಮಾರ ತಿಳಿಸಿದರು.