ದೇವರಹಿಪ್ಪರಗಿ ಪ.ಪಂ ಯಿಂದ 2.85 ಲಕ್ಷ ರೂ, ಉಳಿತಾಯ ಬಜೆಟ್ ಮಂಡನೆ
ದೇವರಹಿಪ್ಪರಗಿ 05 : ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ 2026-27ನೇ ಸಾಲಿನ ವಾರ್ಷಿಕ ಬಜೆಟ್‌ನ್ನು ಪ.ಪಂ ಅಧ್ಯಕ್ಷೆ ಜಯಶ್ರೀ ಬಸಪ್ಪ ದೇವಣಗಾಂವ ಇವರ ಅಧ್ಯಕ್ಷತೆಯಲ್ಲಿ ಮಂಡಿಸಲಾಯಿತು. ಅಧ್ಯಕ್ಷರ ಪರವಾಗಿ ಸಿಬ್ಬಂದಿ ಎಸ್.ಪಿ. ಹಿರೇಮಠ ಅವರು, ರೂ. 68.655 ಕೋಟಿ ಅಂದಾಜು ಆದಾಯ ಹಾಗೂ ರೂ. 68.370 ಕೋಟಿ ಅಂದಾಜು ವೆಚ್ಚದೊಂದಿಗೆ ರೂ. 2.85 ಲಕ್ಷ ಉಳಿತಾಯ ನೀರೀಕ್ಷೆಯ ಬಜೆಟ್ ಪ್ರತಿ ಓದಿ ಸರ್ವ ಸದಸ್ಯರ ಮುಂದೆ ಮಂಡಿಸಲಾಗಿದೆ ಎಂದು ತಿಳಿಸಿದರು. ಪ.ಪಂ ಸಭಾಂಗಣದಲ್ಲಿ ಈ ಸಾಲಿನ ವಾರ್ಷಿಕ ಬಜೆಟ್ ಮತ್ತು ಸಾಮಾನ್ಯ ಸಭೆಯ ವಿಷಯಗಳ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಸದಸ್ಯರುಗಳಾದ ಬಸೀರಹ್ಮದ ಬೇಪಾರಿ (ಕಸಾಬ), ಕಾಸಪ್ಪ ಜಮಾದಾರ, ಕಾಸುಗೌಡ ಬಿರಾದಾರ ಹಾಗೂ ಡಾ. ಗುರುರಾಜ ಗಡೇದ ಅವರು ಪ.ಪಂ ಅಧಿಕಾರಿಗಳ ಜೊತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯಿತು.
ನಂತರ ಮೌಲಾನ ಆಜಾದ್ ಶಾಲೆಗೆ ಜಾಗ ನೀಡುವುದು. ಪಟ್ಟಣದಲ್ಲಿ ಪಡೆದಿರುವ ಉದ್ಯಮಿ ಪರವಾನಗಿ ರದ್ದು ಮಾಡುವುದು. ಪಟ್ಟಣ ವ್ಯಾಪ್ತಿಯಲ್ಲಿ ಕಟ್ಟಡದ ಪರವಾನಗಿ ತೆಗೆದುಕೊಳ್ಳುವುದು. ಎಲ್ಲಾ 17 ವಾರ್ಡಗಳಲ್ಲಿ ಬರುವ ದೇವಸ್ಥಾನಗಳ ಸರ್ವೆ ಮಾಡುವುದು. ಮಾಲಿಕತ್ವ, ವಾಣಿಜ್ಯ ಮಳಿಗೆ, ಭೂ ಬಾಡಿಗೆ ಕರ, ಅಮೃತ-2.0 ಕಾಮಗಾರಿ ಪ್ರಗತಿ ಪರೀಶೀಲನೆ. ಪಟ್ಟಣದ ಮುಖ್ಯ ರಸ್ತೆಯ ಮಧ್ಯದಿಂದ ಬಡಾವಣೆ ನಿರ್ಮಿಸಿದ ಆಸ್ತಿಗಳ ಅಳತೆ ಮಾಡುವುದು. ಪಟ್ಟಣದ ಎಲ್ಲ ಸಿಎ ಸೈಟ್ ನಲ್ಲಿ ನಿರ್ಮಾಣವಾಗಿರುವ ಶೇಡ್ ತೆರವು ಮಾಡುವುದು. ಒಬಿಸಿ ಸ್ಮಶಾನದಲ್ಲಿ ಗಟಾರಗಳ ನೀರು ತೆರವುಗೊಳಿಸುವುದು, ವಾರ್ಡ್ -08ರಲ್ಲಿ ಗಟಾರ ನಿರ್ಮಿಸುವುದು, ಬಂದ ಅರ್ಜಿಗಳ ವಿಲೇವಾರಿ ಮಾಡುವುದ ಕುರಿತು ಸರ್ವ ಸದಸ್ಯರ ಸಭೆಯಲ್ಲಿ ಪರ-ವಿರೋಧ ಚರ್ಚೆ ಸೇರಿ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷರಾದ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಅಪ್ರೋಜ ಅಹಮದ ಪಟೇಲ, ಸದಸ್ಯರುಗಳಾದ ಕಾಸುಗೌಡ ಬಿರಾದಾರ, ಕಾಸಪ್ಪ ಜಮಾದಾರ, ಬಸೀರಹ್ಮದ ಬೇಪಾರಿ(ಕಸಾಬ), ಉಮೇಶ ರೂಗಿ, ಕಾಸಪ್ಪ ಭಜೆಂತ್ರಿ,ಡಾ.ಗುರುರಾಜ ಗಡೇದ, ಶಾಂತಯ್ಯ ಜಡಿಮಠ, ಸಿಂದೂರ್ ಡಾಲೇರ, ಅರೀಫಾ ಬೇಗಂ ಬಾಗವಾನ, ರತ್ನವ್ವ ದೇವೂರ, ಸುಮಂಗಲಾ ಸೇಬೆನವರ, ಶೋಭಾ ಮಲಾರಿ, ದಾನಾಬಾಯಿ ಚವ್ಹಾಣ,ನಾಮ ನಿರ್ದೇಶಿತ ಸದಸ್ಯರುಗಳಾದ ರಾಜು ಮೇಟಗಾರ, ಹುಸೇನ ಕೂಕಟನೂರ ಹಾಗೂ ಸುನೀಲ ಕನಮಡಿ, ಕಿರಿಯ ಅಭಿಯಂತರರಾದ ಗುರುರಾಜ ಬಿರಾದಾರ, ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಸೋಮು ಭೋವಿ, ಸತ್ಯಪ್ಪ ಪೂಜಾರಿ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.