ಕೈಗಾರಿಕೆಗಳ ಸ್ಥಾಪನೆಗಾಗಿ ಒತ್ತಾಯಿಸಿ ನಿರುದ್ಯೋಗ ಭತ್ಯೆ ನೀಡಲು, ಭೂ ಪರಿಹಾರ ಹೆಚ್ಚಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ

ಕೈಗಾರಿಕೆಗಳ ಸ್ಥಾಪನೆಗಾಗಿ ಒತ್ತಾಯಿಸಿ ನಿರುದ್ಯೋಗ ಭತ್ಯೆ ನೀಡಲು, ಭೂ ಪರಿಹಾರ ಹೆಚ್ಚಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ

ಲೋಕದರ್ಶನ ವರದಿ

ಬಳ್ಳಾರಿ 03:ಜಿಲ್ಲೆಯ ಕುಡುತಿನಿ, ಹರಗಿಣಡೋಣಿ, ವೇಣಿವೀರಾಪುರ, ಸಿದ್ದಮ್ಮನಹಳ್ಳಿ, ಕೊಳಗಲ್ಲು ಗ್ರಾಮಗಳ ರೈತರಿಂದ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ರಾಜ್ಯ ಸಕರ್ಾರ ಕಳೆದ 10 ವರ್ಷಗಳ ಹಿಂದೆ ಕೆ.ಎ.ಐ.ಡಿ.ಬಿ., ಮುಖಾಂತರ 12000 ಎಕರೆ ಕ್ಕೂ ಹೆಚ್ಚು ಕೃಷಿ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಭರವಸೆ ನೀಡಿದ್ದರು, ಮಿಥಲ್ರವರು ಎಕರೆಗೆ 8 ಲಕ್ಷ, ಭ್ರಹ್ಮಿಣಿ 5 ಲಕ್ಷ, ಎನ್.ಎಂ.ಡಿ.ಸಿ ಹೀಗೆ ಇತರೆ ಕಂಪನಿಗಳು ಅತ್ಯಂತ ಕಡಿಮೆ ಬೆಲೆ ನೀಡಿ ಭೂಮಿಯನ್ನು ಸಕರ್ಾರ ವಶಪಡಿಸಿಕೊಂಡಿದೆ ಭೂ ಬೆಲೆಯನ್ನು ಅತ್ಯಂತ ಕಡಿಮೆ ನೀಡಿದ್ದು ಮಾರುಕಟ್ಟೆ ಬೆಲೆಗಿಂತ ಸಕರ್ಾರ ನ್ಯಾಯವಾದ ಬೆಲೆ ನೀಡದೆ ರೈತರನ್ನು ವಂಚಿಸಿದೆ, ಆದಕಾರಣ ರೈತರು ಕಳೆದ 10 ವರ್ಷಗಳಿಂದ ಹಲವಾರು ಹೋರಾಟಗಳ ಮುಖಾಂತರ ಭೂ ಬೆಲೆಯನ್ನು ಒಂದು ಎಕರೆಗೆ 58 ಲಕ್ಷಕ್ಕಿಂತ ಹೆಚ್ಚು ಬೆಲೆಯನ್ನು ನೀಡಬೇಕೆಂದು ಸಕರ್ಾರ ಗಮನಕ್ಕೆ ತರಲಾಗಿದೆ. ಮತ್ತು ಕನರ್ಾಟಕ ಹೈಕೋಟರ್್ ಮತ್ತು ಸವರ್ೋಚ್ಛನ್ಯಾಯಾಲಯದಲ್ಲಿ ರೈತರು ದಾವವನ್ನು ಹೂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆ.ಎ.ಐ.ಡಿ.ಬಿ., ಮಿಥಲ್ ಕಂಪನಿಯಿಂದ ಸುಮಾರು 2000 ಎಕರೆಯನ್ನು ಸಣ್ಣ ಕೈಗಾರಿಕೆಗಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಭೂಮಿಯನ್ನು ರೂ. 58 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಆದಕಾರಣ ರೈತರಿಗೆ ನಿಜವಾದ ಭೂ ಬೆಲೆಯನ್ನು ನಿಗದಿಮಾಡಿ ರೈತರಿಗೆ ನೀಡಬೇಕೆಂದು ಒತ್ತಾಯಿಸುತ್ತಿದೆ. ಹೊಸ ಭೂ ವಿವಾದ ಕಾಯ್ದೆಯನ್ವಯ ಯಾವ ಉದ್ದೇಶಕ್ಕಾಗಿ ಕೈಗಾರಿಕೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಂಡಿದೆಯೋ ಆ ಉದ್ದೇಶ 5 ವರ್ಷದೊಳಗೆ ಕೈಗಾರಿಕೆಗಳನ್ನು ಸ್ಥಾಪನೆಮಾಡಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಆ ಭೂಮಿಯನ್ನು ರೈತರಿಗೆ ವಾಪಾಸ್ಸು ನೀಡಿದ ಪ್ರಸಂಗಗಳು ಹಲವು ರಾಜ್ಯಗಳಲ್ಲಿ ನಡೆದಿದೆ. ಆ ಭಾಗದಲ್ಲಿ ಕಳೆದ 10 ವರ್ಷಗಳಿಂದ ಕೈಗಾರಿಕೆ ಸ್ಥಾಪನೆ ಮಾಡದೇ ಸಕರ್ಾರ ವಿಳಂಭಮಾಡುತ್ತಿದೆ. ಭೂಮಿಯನ್ನು ನೀಡಿದ ಕುಟುಂಬಗಳಿಗೆ ಉದ್ಯೋಗವನ್ನು ನೀಡುವ ಭರವಸೆಯನ್ನು ನೀಡಿದ್ದು, ಕೈಗಾರಿಕೆಗಳು ಪ್ರಾರಂಭವಾಗದೇ ಇರುವುದರಿಂದ ರೈತ ಕುಟುಂಬಗಳ ಯುವ ಜನರು ನಿರುದ್ಯೋಗಿಗಳಾಗಿದ್ದು, ಆ ಭಾಗದ ಸಣ್ಣ ಕೈಗಾರಿಕೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಜೀವನ ನಡೆಸುತ್ತಿದ್ದಾರೆ, ಆದಕಾರಣ ಕಳೆದ 5 ವರ್ಷಗಳಿಂದ ಭೂಮಿಯನ್ನು ನೀಡಿದ ಎಲ್ಲಾ ರೈತ ಕುಟುಂಬದವರಿಗೆ ಮಾಸಿಕ ರೂ. 20000/- ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಆದ ಕಾರಣ, ಸೆಂಟರ್ ಆಫ್ ಯುನಿಯನ್ ಟ್ರೇಡಿಂಗ್ (ಸಿ.ಐ.ಟಿ.ಯು) ಮತ್ತು ರೈತ ಸಂಘಟನೆಗಳು ಬಳ್ಳಾರಿ ಜಿಲ್ಲೆಯಲ್ಲಿ ಉದ್ಯೋಗವನ್ನು ಸೃಷ್ಠಿಮಾಡುವ ಉದ್ದೇಶದಿಂದ ಕೈಗಾರಿಕೆಗಳು ಪ್ರಾರಂಭಮಾಡಲು ಸಕರ್ಾರ ಮುಂದಾಗಿದ್ದು ಕೂಡಲೆ ಮಿಥಲ್ ಮತ್ತು ಭ್ರಹ್ಮಿಣಿ, ಎನ್.ಎಂ.ಡಿ.ಸಿ. ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕೈಗಾರಿಗಳನ್ನು ಸ್ಥಾಪನೆ ಮಾಡಲು ಆ ಭಾಗದ ರೈತರು, ಯುವ ಜನರ ಆಕಾಂಕ್ಷೆಯಾಗಿದೆ. ತಾವು ರಾಜ್ಯ ಸಕರ್ಾರದ ಜೊತೆಗೆ ನಮ್ಮ ಮನವಿಯನ್ನು ವಗರ್ಾಯಿಸಿ ರೈತರು, ಕಾಮರ್ಿಕರು ಮತ್ತು ಕೆ.ಎ.ಐ.ಡಿ.ಬಿ. ಮತ್ತು ಕೈಗಾರಿಕೆಯ ಮಾಲಿಕರ ತ್ರಿಪಕ್ಷೀಯ ಸಭೆಯನ್ನು ಆಯೋಜಿಸಿ ಚಚರ್ಿಸುವುದರ ಮುಖಾಂತರ ರೈತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆಗಳಾದ :- ಮಿಥಲ್, ಎನ್.ಎಂ.ಡಿ.ಸಿ., ಭ್ರಹ್ಮಿಣಿ ಕಂಪನಿಗಳನ್ನು ಕೂಡಲೇ ಸ್ಥಾಪಿಸಬೇಕು, ಭೂ ಸ್ವಾಧೀನ ಕಾಯ್ದೆಯನ್ವಯ ಸ್ವಾಧೀನ ಪಡಿಸಿಕೊಂಡ 5 ವರ್ಷಗಳೊಳಗೆ ಉದ್ದೇಶಿತ ಕಾಖರ್ಾನೆಗಳನ್ನು ಮಾಡದಿರುವ ಕಾರಣ ರೈತ ಕುಟುಂಬಗಳಿಗೆ ನಿರುದ್ಯೋಗ ಭತ್ಯೆ ತಿಂಗಳಿಗೆ ರೂ. 20000/-ರಂತೆ ಎಲ್ಲಾ ಭೂ ಸಂತ್ರಸ್ಥರ ಕುಟುಂಬಗಳಿಗೆ ನೀಡಬೇಕು, ಮತ್ತು ಭೂಮಿಯನ್ನು ಅತ್ಯಂತ ಕಡಿಮೆ ಬೆಲೆ ನಿಗದಿಮಾಡಿ ರೈತರಿಗೆ ಪರಿಹಾರ ನೀಡಿದ್ದು, ಮಾರುಕಟ್ಟೆಯ ಬೆಲೆ ಆಧರಿಸಿ ಪ್ರತಿ ಎಕರೆಗೆ ರೂ. 58 ಲಕ್ಷದಂತೆ ಭೂ ಪರಿಹಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಐಟಿಯು ಅಧ್ಯಕ್ಷರಾದ ಆರ್. ಭಾಸ್ಕರ್ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಜೆ. ಸತ್ಯಬಾಬು, ಮುಖಂಡರುಗಳಾದ ಬಿ.ಪೋಲಾಪ್ಪ, ಪಾಂಡುರಂಗ, ರೈತ ಸಂಘದ ಮುಖಂಡರುಗಳಾದ ಕೃಷ್ಣಪ್ಪ, ಶ್ರೀನಿವಾಸ, ಕಟ್ಟಡ ಕಾಮರ್ಿಕರ ಸಂಘದ ಮುಖಂಡ ವಿಜ್ಜೇಶ್, ಶ್ರೀನಿವಾಸ, ಇನ್ನೂ ನೂರಾರು ಮುಖಂಡರುಗಳು ಉಪಸ್ಥಿತರಿದ್ದರು 

ಸುದ್ದಿ ಓದಿ