ಗದಗ- ಹರಪನಹಳ್ಳಿ ರೈಲ್ವೆ ಮಾರ್ಗ ನಿರ್ಮಿಸಲು ಆಗ್ರಹ
ಹೂವಿನಹಡಗಲಿ 05: ಗದಗ-ಹರಪನಹಳ್ಳಿ ನೂತನ ರೈಲ್ವೆ ಮಾರ್ಗದ ಸಮೀಕ್ಷೆ ಯನ್ನು ಅನುಷ್ಠಾನಗೊಳಿಸಲು ಆಗ್ರಹಿಸಿ ಹೂವಿನಹಡಗಲಿ ಹೋರಾಟ ವೇದಿಕೆಯಿಂದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಭಾನುವಾರ ಜಿಂದಾಲ್ ನಲ್ಲಿ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ವೇದಿಕೆಯ ಸಂಚಾಲಕ ಎಸ್.ಎಸ್ ಪಾಟೀಲ್ , ’2014ರ ರೈಲ್ವೆ ಮುಂಗಡ ಪತ್ರದಲ್ಲಿ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಪರಿಷ್ಕೃತ ಪಟ್ಟಿಯಲ್ಲಿ ಮಂಜೂರಾಗಿ 11ವರ್ಷಗಳು ಕಳೆದಿವೆ ಆದರೆ ಅನುಷ್ಠಾನ ಆಗುತ್ತಿಲ್ಲ ಎಂದರು. ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ ಹರಪನಹಳ್ಳಿ ಮತ್ತು ಗದಗ ರೈಲ್ವೆ ಮಾರ್ಗವು ನಮ್ಮ. ತಂದೆ ಎಂ.ಪಿ.ಪ್ರಕಾಶ ಅವರ ಕನಸಾಗಿದ್ದು , ನೂತನ ರೈಲ್ವೆ ಮಾರ್ಗವು ಗದಗ- ಹರಪನಹಳ್ಳಿ ಸಂಪರ್ಕ ದಿಂದ ಬೆಂಗಳೂರು ಸಂಪರ್ಕ ಕಲ್ಪಿಸುತ್ತದೆ ಎಂದ ಅವರು ಕೂಡಲೇ ರೈಲ್ವೆ ಸಮೀಕ್ಷೆ ಮಾಡಲು ಕೈಗೊಳ್ಳಲು ಮನವಿ ಮಾಡಿದರು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳನ್ನು ವಿಳಂಬ ಮಾಡದೇ ಅನುಷ್ಠಾನ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದ ಅವರು ಫೆಬ್ರವರಿ ತಿಂಗಳು ಅಧಿಕಾರ ಸಭೆಯಲ್ಲಿ ಚರ್ಚಿಸಿ,ಕೇಂದ್ರ ದ ಮುಂಬರುವ ಬಜೆಟ್ ನಲ್ಲಿ ಅನುಷ್ಠಾನ ಮಾಡುವುದಾಗಿ ಹೇಳಿದರು. ಇದೇ ವೇಳೆ ಪರ್ತಕರ್ತರಾದ ಎಸ್ .ಎಂ.ಬಸವರಾಜ, ಕೆ.ಅಯ್ಯನಗೌಡ, ಮಧುಸೂದನ್ ಇದ್ದರು.