ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರ ಸಂಘದಿಂದ ಧರಣಿ ಸತ್ಯಾಗ್ರಹ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರ ಸಂಘದಿಂದ ಧರಣಿ ಸತ್ಯಾಗ್ರಹ

ಬಳ್ಳಾರಿ 18:ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘದಿಂದ ಸುವರ್ಣ ಗಾರ್ಡನ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಹಲವು ದಿನಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸರಕಾರದ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರಪತಿಗಳು ಅಂಕಿತ ಹಾಕಿ ಕನರ್ಾಟಕ ರಾಜ್ಯ ಗೆಜೆಟ್ನಲ್ಲಿ 2018ರ ಜೂ.23 ರಿಂದ ಜಾರಿಗೆ ಬಂದಿರುವ ಅಧಿನಿಯಮದ ಪ್ರಕಾರ ಉದ್ಯೋಗದಲ್ಲಿ ಪ.ಜಾ./ಪ.ಪಂ.ದ ನೌಕರರಿಗೆ ತತ್ಪರಿಣಾಮ ಜೇಷ್ಠತೆ ನೀಡುವ ಬಡ್ತಿ ಮೀಸಲಾತಿ ಕಾಯ್ದೆ 2017ನ್ನು ತಕ್ಷಣ ಅನುಷ್ಠಾನ ಮಾಡಬೇಕು. ಪ.ಜಾ/ಪ.ಪಂ.ದ ಸರಕಾರಿ ನೌಕರರಿಗೆ ಸರಕಾರಿ ಕಛೇರಿಗಳು ಹಾಗೂ ಸಾರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರಿಗಳಿಂದ ಆಗುವ ಕಿರುಕುಳ, ಜಾತೀಯತೆ, ಕೆಲಸ ಹಂಚಿಕೆಯಲ್ಲಿ ತಾರತಮ್ಯ, ಬಡ್ತಿ ನೀಡುವಲ್ಲಿ ತಾರತಮ್ಯ, ಸ್ವಜಾತಿ ಪ್ರೇಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಶೇ. 7.5ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು. ಪ.ಜಾ. ಪ.ಪಂ.ದ ವಿದ್ಯಾಥರ್ಿಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಪಡೆಯಲು ವಾಷರ್ಿಕ ಆದಾಯ ಮಿತಿಯನ್ನು 8 ಲಕ್ಷಗಳಿಗೆ ಹೆಚ್ಚಿಸಬೇಕು. ನಮ್ಮ ಹೆಸರಿನಲ್ಲಿ ಹಿಂದುಳಿದ ವರ್ಗದವರು ಪಡೆಯುವ ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕಬೇಕು. ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸುತ್ತಿರುವ ಎನ್ಪಿಎಸ್ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ಜಾರಿಗೆ ತರಬೇಕು ಎಂಬ ಇತ್ಯಾದಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಪಿ.ಮೋಹನ್ಕಿಶೋರ್, ಜಿಲ್ಲಾಧ್ಯಕ್ಷರು, ಬಳ್ಳಾರಿ ಜಿಲ್ಲೆ, ಸಿದ್ರಾಯಿ ಶಿಗಿಹಳ್ಳಿ, ಡಾ. ಸಿ.ತ್ಯಾಗರಾಜ, ಜಿ.ಎನ್.ಕಡದಾಳ, ಪ್ರಭು ನಲವಡಿ, ಎಸ್.ಆರ್.ಗೌಡ್ರ, ಕರಿಣ್ಣವರ, ಸೋಮನಾಥ ಸನದಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


ಸುದ್ದಿ ಓದಿ