ರಾಣೆಬೆನ್ನೂರ

ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಪ್ರತಿಭಟನೆ

ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ:   ಪ್ರತಿಭಟನೆ

ಲೋಕದರ್ಶನ ವರದಿ

ರಾಣೆಬೆನ್ನೂರು 13:  ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟದ ರಾಷ್ಟ್ರೀಯ ಹೆದ್ದಾರಿ, ದೇವರಗುಡ್ಡ ರಸ್ತೆಯ, ರೈಲ್ವೆ ಮೇಲ್ಸೇತುವೆ  ಕಾಮಗಾರಿ, ಆರಂಭ ವಿಳಂಬವಾಗುತ್ತಿರುವುದನ್ನು ವಿರೋಧಿಸಿ  ರೈತರು, ಸಾರ್ವಜನಿಕರು ಒಳ ಸೇತುವೆಯಲ್ಲಿ ನಿಂತಿರುವ  ನೀರಿನಲ್ಲಿ ಪ್ರತಿಭಟಿಸಿ ಧರಣಿ ನಡೆಸಿದರು. ಸೋಮವಾರ ರೈಲ್ವೆ ಗೆಟ್ 219 ರ ಬಳಿ ಜಮಾಯಿಸಿದ, ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಮುಖಂಡರು,  ತಾಲೂಕ ಆಡಳಿತ, ರೈಲ್ವೆ ಇಲಾಖೆಯ ಅಧಿಕಾರಿಗಳು ಧಾವಿಸಬೇಕು, ಕಾಮಗಾರಿ ಆರಂಭಿಸಬೇಕು, ಅಲ್ಲಿಯವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಸಡಿಲಿಸದೇ, ಧರಣಿ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ರವೀಂದ್ರ ಗೌಡ ಪಾಟೀಲ್ ಅವರು, ನಾಲ್ಕು ವರ್ಷ ಅವಿರತ ಹೋರಾಟದ ಪರವಾಗಿ 3.86 ಕೋಟಿ ರೂ ಹಣ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಪ್ರಕ್ರಿಯೆ ಮುಗಿದು ಆರು ತಿಂಗಳಾಯಿತು. ರಾಜ್ಯ ಸರ್ಕಾರ ಭೂ ಸ್ವಾದಿನಕ್ಕಾಗಿ1,37,26,250 ಹಣ ಬಿಡುಗಡೆ ಮಾಡಬೇಕು. ಕೂಡಲೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಭೂಮಿ ಸ್ವಾಧೀನಕ್ಕೆ ರೈತರಿಂದ ಒಪ್ಪಂದವು ಆಗಿದೆ. ಇಂಥ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಹಣ ಬಿಡುಗಡೆಗೆ ಮೀನಾಮೇಷ ಮಾಡುತ್ತಿರುವುದು ಜನ ವಿರೋಧಿ ನೀತಿಯಾಗಿದೆ ಕೂಡಲೇ ಹಣ ಬಿಡುಗಡೆ ಮಾಡಬೇಕು  ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.   ಕಳೆದ ಎರಡು ತಿಂಗಳುಗಳಿಂದ ಮಳೆ  ಸುರಿಯುತ್ತಲಿದೆ. ಇದರಿಂದಾಗಿ ಮೊದಲೇ ಅವೈಜ್ಞಾನಿಕವಾಗಿ ನಿರ್ಮಾಣ ವಾಗಿರುವ ಒಳ ಸೇತುವೆಯಲ್ಲಿ ಅಪಾರ ಪ್ರಮಾಣ ದಲ್ಲಿ ನೀರು ನಿಂತು, ರೈತರಿಗೆ, ವಾಹನ ಸವಾರರಿಗೆ ಜನ-ಜಾನುವಾರುಗಳಿಗೆ ತುಂಬಾ ತೊಂದರೆ ಆಗುತ್ತಲಿದೆ. ಬೇರೆ.ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದರಿಂದ ಇಲ್ಲಿಂದಲೇ ಎಲ್ಲ ವಾಹನಗಳು ಸಂಚರಿಸಬೇಕು. ಒಳ  ಸೇತುವೆಯಲ್ಲಿ ನಿಂತಿರುವ ನೀರು ನೋಡಿದರೆ, ಅನಾಹುತ ಸಂಭವಿಸುವುದು ಗ್ಯಾರಂಟಿ ಎನ್ನುವ ಭಾವ ಮೂಡುತ್ತದೆ. ಈ ಕುರಿತು ಹೋರಾಟ ಮಾಡಿದಾಗ  ತಾತ್ಕಾಲಿಕವಾಗಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ ರೈಲ್ವೆ ಅಧಿಕಾರಿಗಳು, ಪುನಹ ಇತ್ತಕಡೆ ತಿರುಗಿ ನೋಡಿಲ್ಲ, ಎಂದು ಕಿಡಿಕಾರಿದರು. ಸ್ಥಳಕ್ಕೆ  ಧಾವಿಸಿದ ತಹಸೀಲ್ದಾರ್ ಶಂಕರ್. ಜಿ. ಎಸ್.ಅವರು, ತಕ್ಷಣವೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಸರಕಾರದ ಗಮನಕ್ಕೆ ತಂದು ಹಣ ಬಿಡುಗಡೆಗೆ ಮುಂದಾಗುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ ರೈಲ್ವೆ ವಿಭಾಗದ  ಮ್ಯಾನೇಜರ್ ವೇಣುಗೋಪಾಲ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಒಳ ಸೇತುವೆ ನಿಂತಿರುವ ನೀರು, ನಿಲ್ಲದಂತೆ ಕ್ರಮವಹಿಸಬೇಕೆಂದು  ಎಚ್ಚರಿಸಿದರು ರೈಲ್ವೆ ಇಲಾಖೆ ಅಧಿಕಾರಿಗಳಾದ ಸತ್ತಪ್ಪ ಮೂಕಣ್ಣ ನವರ, ಷಣ್ಮುಖಪ್ಪ, ಎಸ್. ವಿ.ಗುಳೇದ ಮತ್ತಿತರರು ಉಪಸ್ಥಿತರಿದ್ದರು ಪ್ರತಿಭಟನೆ ಮುಂಚೂಣಿಯಲ್ಲಿ ಮುಖಂಡರಾದನಿತ್ಯಾನಂದ ಕುಂದಾಪುರ, ಕರಬಸಪ್ಪ ಜಾಡರ, ಚಂದ್ರಣ್ಣ ಬೇಡರ, ಜಗದೀಶ್ ಕೆರೋಡಿ, ಕೊಟ್ರೇಶಪ್ಪ ಎಮ್ಮೆ, ಹರಿಹರ ಗೌಡ ಪಾಟೀಲ, ಕರಬಸಪ್ಪ ಕೊಲೆರ, ರಾಜು ಓಲೆಕಾರ್, ರವಿ ಮಲ್ಲಳ್ಳಿ, ಗುಡ್ಡಪ್ಪ ಮಲ್ಲಾಡದ, ರಮೇಶ್ ಕೆಂಪಣ್ಣನವರ್, ಗೋವಿಂದ ಲಮಾಣಿ, ಬಸವರಾಜ ನೆಲೋಗಲ್, ಲೋಕಪ್ಪ ಲಮಾಣಿ ಸೇರಿದಂತೆ ಸಂಘಟನೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರ 

ಸುದ್ದಿ ಓದಿ