ಕಾರವಾರ

ಸಾಲಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆ: ರೈತ ಆತ್ಮಹತ್ಯೆ

ಮುಂಡಗೋಡ 10: ಸಾಲ ಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಡಸಗಾಂವ ಗ್ರಾ.ಪಂ ವ್ಯಾಪ್ತಿಯ ತೊಗ್ರಳ್ಳಿ ಗ್ರಾಮದಲ್ಲಿ ಗುರುವಾರ ಸಂಬವಿಸಿದೆ.

ಪ್ರಭಾಕರ ವಾಮನ್ ಕೊಸರ್ೆ(51) ನೇಣಿಗೆ ಶರಣಾದ ರೈತ. ಸ್ಥಳಿಯ ಸಹಕಾರಿ ಸಂಘ ಹಾಗೂ ವಿವಿದ ಬ್ಯಾಂಕ್ ಸೇರಿದಂತೆ ಒಟ್ಟು 4.10 ಲಕ್ಷ  ರೂಪಾಯಿ ಸಾಲ ಮಾಡಿಕೊಂಡಿದ್ದರು. 

ಇತ್ತೀಚೆಗೆ ಕಾಡಾನೆಗಳು ದಾಳಿ ನಡೆಸಿ ಇವರ ಗದ್ದೆಯಲ್ಲಿ ಬೆಳೆದ ಬತ್ತದ ಬೆಳೆ ಕೂಡ ಹಾನಿ ಮಾಡಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮನ ನೊಂದಿದ್ದ ಇವರು, ಸಾಲ ತೀರಿಸುವುದು ಹೇಗೆ ಎಂಬ ಬಯದಿಂದ ಗುರುವಾರ ಗದ್ದೆಯ ಅಂಚಿನ ಗಿಡಕ್ಕೆ ನೇಣಿ ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮುಂಡಗೋಡ ಪೊಲೀಸರ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸುದ್ದಿ ಓದಿ