ಯರಗಟ್ಟಿ

ಹಾವು ಕಡಿದು ಸಾವು

ಹಾವು ಕಡಿದು ಸಾವು

ಹಾವು ಕಡಿದು ಸಾವು 

ಯರಗಟ್ಟಿ 24: ಸಮೀಪದ ಮದ್ಲೂರ ಗ್ರಾಮದ ರೈತ ಮಹಿಳೆ ಹೊಲದಲ್ಲಿ ಕೂಲಿ ಕೆಲಸ ಮಾಡುವ ವೇಳೆ ಹಾವು ಕಡಿದು ಸಾವನಪ್ಪಿರುವ ಘಟನೆ ಜರುಗಿದೆ.ಮೃತ ಮಹಿಳೆ ಫಕ್ಕೀರವ್ವ ಫಕ್ಕೀರ​‍್ಪ ಹೂಲಿ (49) ಎನ್ನುವವರು ಕಬ್ಬಿನ ಹೊಲದಲ್ಲಿ ಹುಲ್ಲಿನ ಕೀಳುವಾಗ ಹಾವು ಕಡಿತಕ್ಕೆ ಒಳಗಾಗಿದ್ದಾಳೆ.ಸರಕಾರಿ ಆಸ್ಪತ್ರೆ ತರುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾರೆ.  

ಮೃತ ಮಹಿಳೆಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಮುರಗೋಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.ವಿಷಯ ತಿಳಿದ ಕೂಡಲೇ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ರೈತ ಮಹಿಳೆ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ದಾಖಲಾತಿಗಳ ಮಾಹಿತಿ ಪಡೆದು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. 


ಸುದ್ದಿ ಓದಿ