ದಶಕಂಠ ರಾವಣ ಶಿವನ ಆತ್ಮಲಿಂಗ ತೊಗಲುಗೊಂಬೆ ಆಟ ಪ್ರದರ್ಶನ
ಬಳ್ಳಾರಿ 4:ಶಿವಶ್ರೀ ಸಾರ್ವಜನಿಕ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಇವರಿಂದ ದಶಕಂಠ ರಾವಣ ಶಿವನ ಆತ್ಮಲಿಂಗ ತೊಗಲುಗೊಂಬೆ ಪ್ರದರ್ಶನ ಶನಿವಾರ ರಾತ್ರಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದ ಬಯಲುರಂಗಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅವರು ಮಾತನಾಡುತ್ತ ಇಂದಿನ ದಿನಗಳಲ್ಲೂ ಸಹ ತೊಗಲುಗೊಂಬೆ ಪ್ರದರ್ಶನಕ್ಕೆ ಆದ್ಯತೆ ನೀಡುತ್ತಿರುವುದು ಗಮನಾರ್ಹ ಸಂಗತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಹನುಮಂತಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೋಟೆ ಈರಮ್ಮ, ಶಿವಶ್ರೀ ಸಾರ್ವಜನಿಕ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಬಿ. ಶಿವರಾಜಗೌಡ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷರಾದ ಕೆ.ಹೊನ್ನೂರುಸ್ವಾಮಿ ಅವರು ತೊಗಲುಗೊಂಬೆ ಪ್ರದರ್ಶನ ನೀಡಿದರು. ಪ್ರಾರಂಭದಲ್ಲಿ ಶ್ರೀಮತಿ ಲಕ್ಷ್ಮಿದೇವಿ ಹೊನ್ನೂರುಸ್ವಾಮಿ ಸ್ವಾಗತಿಸಿದರೆ, ಎಂ.ಡಿ.ಖಾಸೀಂಸಾಬ್ ವಂದಿಸಿದರು.