ರೈತರ ಬಾಕಿ ಮೊತ್ತ ಪಾವತಿಗೆ ಅಗತ್ಯ ಕ್ರಮಕೈಗೊಳ್ಳಲು ಡಿಸಿ ತಹಸೀಲ್ದಾರರಿಗೆ ಸೂಚನೆ
ಲೋಕದರ್ಶನ ವರದಿ
ಬಳ್ಳಾರಿ08: ಸಿರಗುಪ್ಪ ತಾಲೂಕಿನ ದೇಶನೂರಿನ ಎನ್.ಎಸ್.ಎಲ್.ಶುಗರ್ಸ್ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬೆಲೆಯನ್ನು ಪಾವತಿ ಮಾಡದೇ ಇರುವುದರಿಂದ ಸದರಿ ಕಾಖರ್ಾನೆಯ ಆಸ್ತಿಯನ್ನು ಮಾರಾಟ ಮಾಡದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಆದೇಶ ಹೊರಡಿಸಿದ್ದಾರೆ.
ಸಿರುಗುಪ್ಪ ತಾಲೂಕಿನ ದೇಶನೂರಿನ ಎನ್.ಎಸ್.ಎಲ್ ಶುಗರ್ಸ್ ಕಾಖರ್ಾನೆಗೆ ಕಾಯ್ದಿರಿಸಿದ ಪ್ರದೇಶದಲ್ಲಿ ಕಬ್ಬು ಬೆಳೆದ ರೈತರಿಗೆ 2017-18ನೇ ಸಾಲಿನಲ್ಲಿ ಸುಮಾರು 3.07 ಕೋಟಿ ರೂ.ಗಳ ಪಾವತಿ ಮಾಡಲು ಬಾಕಿ ಇದ್ದು, ಸದರಿ ಕಾಖರ್ಾನೆಯು ರೈತರಿಗೆ ಸುಸ್ತಿ ಬಾಕಿದಾರರಾಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ. ಆದ್ದರಿಂದ ಸದರಿ ಮೊತ್ತವನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲು ಮತ್ತು ಕಬ್ಬು ನಿಯಂತ್ರಣ ಆದೇಶ 1966ರ ಕ್ಲಾಸ್ (3)ರಂತೆ ಬಾಕಿ ಇರುವ ರೈತರಿಗೆ ಬಾಕಿ ಮೊತ್ತವನ್ನು ಪಾವತಿ ಮಾಡಲು ಅಗತ್ಯ ಕ್ರಮ ಜರುಗಿಸುವಂತೆ ಸಿರಗುಪ್ಪ ತಹಸೀಲ್ದಾರರಿಗೆ ಸೂಚಿಸಿದ್ದಾರೆ.
ಭೂ ಕಂದಾಯ ಕಾಯ್ದೆ 1964 ಕಲಂ 190ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು 3.07 ಕೋಟಿ ಬಾಕಿ ಮೊತ್ತ ಮತ್ತು ಸದರಿ ಬಾಕಿ ದಿನಾಂಕದಿಂದ ಅದರ ಮೇಲಿನ ಶೇ.15ರ ಬಡ್ಡಿ ಮೊತ್ತವನ್ನು ಭೂ ಕಂದಾಯ ಬಾಕಿಯೆಂದುದ್ದು, ಅದನ್ನು ಕಾರಖಾನೆಯಿಂದ ವಸೂಲಿ ಮಾಡಿ ರೈತರಿಗೆ ಪಾವತಿ ಮಾಡಬೇಕು. ರೈತರಿಗೆ ಹಣ ಪಾವತಿಸಿದ ವಿವರಗಳನ್ನು ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ದೇಶನೂರು ಎನ್.ಎಸ್.ಎಲ್.ಶುಗರ್ಸ್ ಕಾಖರ್ಾನೆಯು ರೈತರಿಗೆ ಸುಸ್ತಿ ಬಾಕಿದಾರರಾಗಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾಗ್ಯೂ ಮತ್ತು ಸದರಿ ಕಾಖರ್ಾನೆಯ ಆಡಳಿತ ಮಂಡಳಿಗೆ ಸದರಿ ಬಾಕಿ ಪಾವತಿಸುವಂತೆ ಎಷ್ಟೇ ಮನವೊಲಿಸಿದಾಗ್ಯೂ ಹಣವನ್ನು ರೈತರಿಗೆ ಪಾವತಿಸಿರುವುದಿಲ್ಲ.
ಈ ಕಾಖರ್ಾನೆಯು ದೇಶನೂರು ಗ್ರಾಮದಲ್ಲಿ ಒಟ್ಟು 141.97 ಎಕರೆ ಜಮೀನುಗಳನ್ನು ಹೊಂದಿದ್ದು ಮತ್ತು ಕಾಖರ್ಾನೆಯು ಯಾವುದೇ ಸಮಯದಲ್ಲಿ ಸದರಿ ಜಮೀನುಗಳನ್ನು ಮಾರಾಟ ಮಾಡುವ ಸಂಭವವಿದೆ ಎಂದು ತಿಳಿದುಬಂದಿದೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿದರ್ೇಶಕರು ಹಾಗೂ ಆಯುಕ್ತರು ಬಾಕಿ ಮೊತ್ತವನ್ನು ಭೂ ಕಂದಾಯ ಬಾಕಿಯಂತೆ ಪರಿಗಣಿಸಿ ವಸೂಲಿ ಮಾಡಲು ಕ್ರಮ ಜರುಗಿಸುವಂತೆ ನಿದರ್ೆಶನ ನೀಡಿದ್ದು, ಅದರನ್ವಯ ಈ ಆದೇಶ ಹೊರಡಿಸಲಾಗಿದೆ.