ರಾಣೆಬೆನ್ನೂರ

ಸಂಸ್ಕೃತಿ ಪ್ರತಿಬಿಂಬಿಸಿದ ಪ್ರತಿಭಾ ಕಾರಂಜಿ ಪರಿಪೂರ್ಣ ಶಿಕ್ಷಣತೆಗೆ ಸಾಂಸ್ಕೃತಿಕ ಕಲೆಗಳು ಅಗತ್ಯ: ಅರುಣ್ ಕುಮಾರ್

ಸಂಸ್ಕೃತಿ ಪ್ರತಿಬಿಂಬಿಸಿದ ಪ್ರತಿಭಾ ಕಾರಂಜಿ ಪರಿಪೂರ್ಣ ಶಿಕ್ಷಣತೆಗೆ ಸಾಂಸ್ಕೃತಿಕ ಕಲೆಗಳು ಅಗತ್ಯ: ಅರುಣ್ ಕುಮಾರ್

ರಾಣೆಬೆನ್ನೂರು 02:ವಿದ್ಯಾರ್ಥಿ ಗಳು ಸಮಗ್ರ ಶಿಕ್ಷಣ ವಂತರಾಗಬೇಕಾದರೆ ಸ್ಪಧ್ರಾತ್ಮಕ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು. 

 ಶನಿವಾರ ಇಲ್ಲಿನ ಲಯನ್ಸ್ ಶಾಲಾ ಭವನದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ, ಬಿಇಓ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ, 2022-23ನೇ ಸಾಲಿನ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಲೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಥರ್ಿಗಳು ಈ ದೇಶದ ಭಾವಿ ಪ್ರಜೆಗಳು, ಶಿಕ್ಷಣದ ಜೊತೆ, ಜೊತೆಗೆ ಅವರಲ್ಲಿ ಆಂತರಿಕವಾಗಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸುವ, ಗೌರವಿಸುವ, ವೇದಿಕೆಗೆ ಪರಿಚಯಿಸುವ ಮಹತ್ವದ ಕೆಲಸ, ಎಲ್ಲ ಶಿಕ್ಷಕರು ಮಾಡಿದಾಗ ಮಾತ್ರ ಆ ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ನಿರ್ಮಿ ಸಿಕೊಳ್ಳಲು ಸಾಧ್ಯವಾಗುವುದು ಎಂದರು. 

ಮುಖ್ಯ ಅತಿಥಿಯಾಗಿದ್ದ ಎಂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ ಅವರು, ಗುರುಗಳು ವಿದ್ಯಾಥರ್ಿಗಳನ್ನು ನಿರೂಪಿಸುವ ಬಹು ಮುಖ್ಯ ಪಾತ್ರಧಾರಿಗಳು, ಅವರ ಸೇವೆ ಅನನ್ಯವಾದದ್ದು, ಸಮಾಜದಲ್ಲಿ ಸದಾಕಾಲ ಗೌರವ, ಪ್ರೀತಿ,ವಿಶ್ವಾಸ, ಹೊಂದುವವರಾಗಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ 

ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಹೆಚ್ ಪಾಟೀಲ್ ಅವರು, ಪ್ರತಿಭಾ ಕಾರಂಜಿ, ಕೇವಲ ಮನೋರಂಜನೆಗಾಗಿ ಮಾತ್ರ ಅಲ್ಲ. ಮಕ್ಕಳಲ್ಲಿರುವ ಆಂತರಿಕ ಪ್ರತಿಭೆಯನ್ನು ಗುರುತಿಸುವ ಮೂಲಕ, ಅವರಿಗೆ ವೇದಿಕೆ ಕಲ್ಪಿಸುವ ಉದ್ದೇಶವಾಗಿದೆ ಸರಕಾರ ಈ ನಿಟ್ಟಿನಲ್ಲಿ ಸಾಂಸ್ಕೃತಿಕವಾಗಿ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತದೆ ಎಂದರು. ಶಾಲಾ ಹಂತದಲ್ಲಿ ಸ್ಪರ್ಧೆ   ನಡೆದು, ಇದೀಗ ತಾಲೂಕ ಮಟ್ಟದಲ್ಲಿ ಪ್ರತಿಭೆ ಮೆರೆಯಲಿದ್ದಾರೆ. ನಂತರ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವರು. ಸ್ಪರ್ಧೆ ಯಲ್ಲಿ ತಾಲೂಕಿನ 1300  ನೂರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದಾರೆ. 20 ಕ್ಲಷ್ಟರಗಳಿಂದ, 260, ಶಿಕ್ಷಕರು, ಮತ್ತು 175 ನಿಣರ್ಾಯಕರು ತಮ್ಮ ಸೇವಾಕಾರ್ಯ ಮೆರೆಯಲಿದ್ದಾರೆ ಎಂದು ವಿವರಿಸಿ ಮಾತನಾಡಿದರು. 

ತಹಸಿಲ್ದಾರ್ ಶಂಕರ್ ಜಿ.ಎಸ್. ಅವರು ಶಿಕ್ಷಣ ಪರಿಪೂರ್ಣತೆಯಲ್ಲಿ ವಿದ್ಯಾಥರ್ಿಗಳು  ಮತ್ತು ಸಾಂಸ್ಕೃತಿಕ ಚಟುವಟಿಕೆಗಳ, ಪಾತ್ರ ಕುರಿತು ಮಾತನಾಡಿದರು. ಪೌರಾಯುಕ್ತ ಉದಯಕುಮಾರ್ ಬಿ.ಟಿ.ಶಿವಕುಮಾರ್ ನರಸ ಗೊಂಡರ, ಜಗದೀಶ್ವರ ಬಿ.ಎಫ್,, ಮಂಜುನಾಥ ಓಲೆಕಾರ್, ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಗಣ್ಯರಾದ, ಎಂ ಡಿ ರಾಮಣ್ಣನವರ, ಎಚ್. ಎಂ.ಸುತಾರ, ಅನ್ನಪೂರ್ಣ ಕಟಗಿ, ಎಸ್. ಬಿ.ಧೂಳೇಹೊಳೆ, ಸಿ.ಹೆಚ್. ಮೇಗಳಮನಿ, ಡಾ ಮಾಲತೇಶ ಚಲವಾದಿ, ಜಗದೀಶ್ ಕೃಷ್ಣಪ್ಪನವರ, ಆರ್ ಡಿ ಹೊಂಬರಡಿ, ರೇಣುಕಾ ಬಸೆನಾಯಕರ, ಬಸವರಾಜ ಗುಡಿ ಹಿಂದ್ಲರ್, ಸುಹೀಲ್ ರಟ್ಟಿಹಳ್ಳಿ, ಎಂ.ಕೆ.ಸಾಲಿಮಠ, ಎಂ ಎನ್ ರೆಡ್ಡಿ, ಟಿ.ಹೆಚ್.ಹೊಸಮನಿ ಶಿವಾನಂದ್ ಕಬಾಡಿ, ಸೇರಿದಂತೆ ಮತ್ತಿತರ ಗಣ್ಯರು  ಸಂಘಟನೆ ಮುಖಂಡರು ಉಪಸ್ಥಿತರಿದ್ದರು ಅನುಶ್ರೀ ಸಂಗಡಿಗರು ಪ್ರಾಥರ್ಿಸಿದರು. ಇಂದಿರಾ ಕೊಪ್ಪದ ನಿರೂಪಿಸಿ, ಮಂಜ ನಾಯಕ್ ಸ್ವಾಗತಿಸಿದರು.ಎಂ.  ಎಸ್.ಪಾಟೀಲ್ ವಂದಿಸಿದರು 

ಸುದ್ದಿ ಓದಿ