ವೀರಶೈವ ವಿದ್ಯಾವರ್ಧಕ ಸಂಘದ ಸಾಂಸ್ಕೃತಿಕ ಉತ್ಸವ ವಿದ್ಯಾಥರ್ಿಗಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು: ಸುಭಾಷ್

ವೀರಶೈವ ವಿದ್ಯಾವರ್ಧಕ ಸಂಘದ ಸಾಂಸ್ಕೃತಿಕ ಉತ್ಸವ  ವಿದ್ಯಾಥರ್ಿಗಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು: ಸುಭಾಷ್

ಲೋಕದರ್ಸನ ವರದಿ

ಬಳ್ಳಾರಿ 24: ವೀರಶೈವ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಪಾರ ಸೇವೆಗೆ ಪೂರಕವಾಗಿ `ಮಾಸ್ಟರ್ ಇನ್ ಟೆಂಪಲ್ ಆಟರ್ಿಟೆಕ್ಚರ್ ನೂತನ ಪದವಿಯನ್ನು ಪ್ರಾರಂಭಿಸಲು ಸಂಪೂರ್ಣ ಬೆಂಬಲ ನೀಡುವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಎಂ.ಎಸ್. ಸುಭಾಷ್ ತಿಳಿಸಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘ ಏರ್ಪಡಿಸಿರುವ `ಸಾಂಸ್ಕೃತಿಕ ಉತ್ಸವ'ಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾಥರ್ಿಗಳಲ್ಲಿ ಸುಪ್ತವಾಗಿರುವ ಕಲೆ, ಪ್ರತಿಭೆ ಮತ್ತು ಕೌಶಲ್ಯವನ್ನು ಅನಾವರಣ ಮಾಡಲು ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ಈ ನಿಟ್ಟಿನಲ್ಲಿ ವೀರಶೈವ ವಿದ್ಯಾವರ್ಧಕ ಸಂಘವು ಹಮ್ಮಿಕೊಂಡಿರುವ ಸಾಂಸ್ಕೃತಿಕ ಉತ್ಸವವು, ವಿದ್ಯಾಥರ್ಿಗಳಲ್ಲಿ ಸಂಸ್ಕೃತಿಯ ಜೊತೆ ಜೊತೆಯಲ್ಲಿ ಸಂಸ್ಕಾರಯುಕ್ತ ಬದುಕನ್ನು ರೂಪಿಸುವಲ್ಲಿ ಪೂರಕವಾಗಿದೆ ವಿದ್ಯಾಥರ್ಿಗಳ ಮನಸ್ಸಿನ ಮೇಲೆ ಪೋಷಕರು ಮತ್ತು ಬೋಧಕರು ಹೆಚ್ಚಿನ ಒತ್ತಡ ಹೇರದೇ ಸಹಜವಾದ ಬೆಳವಣಿಗೆಗೆ ಮುಕ್ತ ಅವಕಾಶಗಳನ್ನು ಸೃಷ್ಷಿಸಬೇಕು. ಅಲ್ಲದೇ, ವಿದ್ಯಾಥರ್ಿಗಳಲ್ಲಿಯ ಕಲಿಕಾ ಒತ್ತಡ ನಿವಾರಣಕ್ಕೆ ಕಲೆ, ಸಂಸ್ಕೃತಿ ಮತ್ತು ಪಠ್ಯೇತರ ಚಟುವಟಿಕೆಗಳತ್ತ ಗಮನ ನೀಡಲು ಪ್ರೋತ್ಸಾಹ ನೀಡಬೇಕು ಎಂದರು. 

ಹೂವಿನಹಡಗಲಿಯ ರಂಗಭಾರತಿ ಅಧ್ಯಕ್ಷರಾದ ಸುಮಾ ವಿಜಯ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ ವಿಶಿಷ್ಟವಾಗಿದೆ. ಜಿಲ್ಲೆಯ ಕಲಾವಿದರು, ಕಲಾಪೋಷಕರು ಮತ್ತು ಕಲಾಸಕ್ತರು ಜಿಲ್ಲೆಯ ಸಾಂಸ್ಕೃತಿಕ ಮೆರಗನ್ನು ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ವೀರಶೈವ ವಿದ್ಯಾವರ್ಧಕ ಸಂಘಧ ಪದಾಧಿಕಾರಿಗಳು ಕಲೆ, ನಾಟಕ ಮತ್ತು ಚಿತ್ರಕಲೆಯ ಕೋಸರ್್ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್ ಮಾತನಾಡಿ, ವಿಶ್ವಿವಿದ್ಯಾಲಯದ ಕುಲಪತಿಗಳ ಆಸಕ್ತಿಯಂತೆ ಹೊಸ ಪದವಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸಂಘವು ಆಸಕ್ತಿ ಹೊಂದಿದೆ. ವಿಶ್ವವಿದ್ಯಾಲಯವು ಸಂಘದ ಮೇಲೆ ಇರಿಸಿರುವ ವಿಶ್ವಾಸ, ಭರವಸೆ ಮತ್ತು ಗೌರವಕ್ಕೆ ನಾವುಗಳು ಅಭಾರಿ ಎಂದರು. 

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಚೋರನೂರು ಟಿ. ಕೊಟ್ರಪ್ಪ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆಡಳಿತ ಮಂಡಲಿ ಅಧ್ಯಕ್ಷ ಹಚ್ಚೊಳ್ಳಿ ಶರಣಗೌಡ ಪ್ರದರ್ಶನ ಮಾಡಿದ `ರಕ್ತರಾತಿ'್ರ ನಾಟಕದ ದೃಶ್ಯ  ಮತ್ತು ವಿದ್ಯಾಥರ್ಿ ಡಿ. ನವೀನ್ ಅವರ ಬಯಲಾಟ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು. ಹರಗಿನಡೋಣಿ ಪಂಚವಣಗಿ ಸಂಸ್ಥಾನ ಹಿರೇಮಠದ ಅಭಿನವ ಸಿಧ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ವೀರಶೈವ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಸೇವೆ, ನಾಡಿನ ಉದ್ದಗಲಕ್ಕೂ ವಿಸ್ತಾರಗೊಂಡಿದೆ. ದೇವಾಲಯ ನಿಮರ್ಾಣದ ವಾಸ್ತು ಶಿಲ್ಪ ಬೋಧನೆಯ ಹೊಸ ಪದವಿ ಪ್ರಾರಂಭಕ್ಕೆ ವಿಶ್ವವಿದ್ಯಾಲಯ ಮುಕ್ತ ಮನಸ್ಸಿನಿಂದ ಪರವಾನಿಗೆ ನೀಡಿರುವು ಶ್ಲಾಘನೀಯ ಎಂದರು. 

ಸಂಘದ ಉಪಾಧ್ಯಕ್ಷ ಎಚ್.ಎಂ. ವೀರಭದ್ರ ಶರ್ಮ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದಶರ್ಿ ಚೋರನೂರು ಟಿ. ಕೊಟ್ರಪ್ಪ ಸ್ವಾಗತಿಸಿದರು. ಸಂಘದ ಸಹ ಕಾರ್ಯದಶರ್ಿ ಕೆ. ವೀರೇಶಗೌಡ ಅವರು ವಂದನಾರ್ಪಣೆ ಸಲ್ಲಿಸಿದರು.  ಸಂಘದ ಮಾಜಿ ಕಾರ್ಯದಶರ್ಿ ಪಲ್ಲೇದ ಪಂಪಾಪತಿ ವೇದಿಕೆಯಲ್ಲಿದ್ದರು. ರಾವ್ ಬಹದ್ದೂರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾಥರ್ಿಗಳು ದೇಶಭಕ್ತಿ ಗೀತೆ ಗಾಯನ, ಹೊಸಪೇಟೆಯ ವಿಜಯನಗರ ಪದವಿ ಕಾಲೇಜು ವಿದ್ಯಾಥರ್ಿಗಳು ಭರತನಾಟ್ಯ ಪ್ರದರ್ಶನ, ಎಸ್.ಕೆ. ಮೋದಿ ಇಂಟರ್ನ್ಯಾಷನ್ ಶಾಲೆ ವಿದ್ಯಾಥರ್ಿಗಳು ಸಹ್ಯಾದ್ರಿ ತಪ್ಪಲಲ್ಲಿ ಜಾನಪದ ರೂಪಕ, ಹೂವಿನಹಡಗಲಿಯ ಜಿಬಿಆರ್ ಪದವಿ ಕಾಲೇಜಿನ ವಿದ್ಯಾಥರ್ಿಗಳು ಲಂಬಾಣಿ, ಜಾನಪದ, ದೇಶಭಕ್ತಿ ನೃತ್ಯ, ಹೀರದ ಸೂಗಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾಥರ್ಿಗಳು ಜಾನಪದ ನೃತ್ಯ, ಶೆಟ್ರಗುರು ಶಾಂತಪ್ಪ ಹೈಸ್ಕೂಲ್ನ ವಿದ್ಯಾಥರ್ಿಗಳು ಏಕಪಾತ್ರಾಭಿನ, ವಚನ ನೃತ್ಯ, ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾಥರ್ಿಗಳು ದೇಶಭಕ್ತಿ ಗೀತೆ ಗಾಯನ, ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ವಿದ್ಯಾಲಯದ ವಿದ್ಯಾಥರ್ಿಗಳು ಕಂಸಾಳೆ ನೃತ್ಯ, ಕೊಟ್ಟೂರುನ ಕೊಟ್ಟೂರೇಶ್ವರ ಕಾಲೇಜುನ ವಿದ್ಯಾಥರ್ಿಗಳು ನಂದಿಕೋಲು ಕುಣಿತ, ವುಂಕಿ ಮರಿಸಿದ್ಧಮ್ಮ ಪ್ರಾಥಮಿಕ ಶಾಲೆ ದೇಶಭಕ್ತಿ ನೃತ್ಯ, ಟಿವಿಎಂ ಫಾರ್ಮಸಿ ಕಾಲೇಜಿನ ವಿದ್ಯಾಥರ್ಿಗಳು ಶಾಸ್ತ್ರೀಯ ನೃತ್ಯ, ತಂಬ್ರಹಳ್ಳಿಯ ಕೆಪಿಜೆ ಹೈಸ್ಕೂಲ್ ಡೊಳ್ಳುಕುಣಿತ, ಸಿಲ್ವರ್ ಜ್ಯುಬಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ಜಾನಪದ ನೃತ್ಯ, ಮುನಿರಾಬಾದ್ನ ವಿಜಯನಗರ ಸಂಯುಕ್ತ ಕಾಲೇಜಿನ ಪ್ರೌಢಶಾಲಾ ವಿದ್ಯಾಥರ್ಿಗಳಿಂದ ಕಾಡುಜನರ ನೃತ್ಯ, ವೀರಶೈವ ಪದವಿ ಕಾಲೇಜಿನ ವಿದ್ಯಾಥರ್ಿಗಳಿಂದ ಜಾನಪದ ನೃತ್ಯ, ತಂಬ್ರಹಳ್ಳಿಯ ಅಕ್ಕಿಬಸ್ಸಮ್ಮ ತೋಟಪ್ಪ ಕಾಲೇಜಿನ ವಿದ್ಯಾಥರ್ಿಗಳಿಂದ ಜಾನಪದ ನೃತ್ಯ ಪ್ರದರ್ಶನಗೊಂಡವು.


ಸುದ್ದಿ ಓದಿ