ಹೂವಿನ ಹಡಗಲಿ

ಮತದಾನ ಪ್ರಕ್ರಿಯೆ ಜಾಗೃತಿ ಮೂಡಿಸಿ

ಮತದಾನ ಪ್ರಕ್ರಿಯೆ ಜಾಗೃತಿ ಮೂಡಿಸಿ

ಮತದಾನ ಪ್ರಕ್ರಿಯೆ ಜಾಗೃತಿ ಮೂಡಿಸಿ  

ಹೂವಿನ ಹಡಗಲಿ 12: ಭವಿಷ್ಯದ ಯುವ ಮತದಾರರಿಗೆ ಮತದಾನದ ಪ್ರಕ್ರಿಯೆ ಜಾಗೃತಿ ಮೂಡಿಸಿರಿ ಎಂದು ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಜಿ ಪಿ ಜಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹೊಸ ಮತದಾರರ ನೊಂದಣಿ ಹಾಗೂ ಮತದಾರರ ಗುರುತಿನ ಚೀಟಿ ಏನಾದರೂ ಬದಲಾವಣೆ ಇದ್ದಲ್ಲಿ ಸರಿಪಡಿಸಲು ಮಾಹಿತಿ ನೀಡಲು ತಿಳಿಸಿದರು.ಸಮಾಜ ವಿಜ್ಞಾನ ಶಿಕ್ಷಕರಾದ ಬನ್ನೆಪ್ಪ , ಅನ್ನದಾನಸ್ವಾಮಿ ಹಿರೇಮಠ ಚಿತ್ರಕಲಾ ಶಿಕ್ಷಕರಾದ ಗಂಗಾಧರ ಉಪಸ್ಥಿತರಿದ್ದರು.ತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ