ಮೂಲಭೂತ ಸೌಕರ್ಯಗಳ ನಿರ್ಲಕ್ಷಕ್ಕೆ ಕರವೆ ಖಂಡನೆ
ಬಳ್ಳಾರಿ 29:ನಗರದ ವಾಡರ್್.ನಂ 05 ಗುಗ್ಗರಹಟ್ಟಿ, ಇಂದಿರಾನಗರ, ಬಂಡಿಮೊಟ್ ಮತ್ತು ಮುಂಡರಗಿ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಚತೆ, ಬೀದಿ ದೀಪ ದುರಸ್ತಿ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಲ್ಲದೇ ಜನರಿಗೆ ಸಮಸ್ಯೆಯಾಗಿದ್ದು ಇದಕ್ಕೆ ಪ್ರಮುಖ ಕಾರಣವೆಂದರೆ ಬಳ್ಳಾರಿ ಮಹಾನಗರ ಪಾಲಿಕೆಯ ನಿರ್ಲಕ್ಷ ಭಾವನೆಯಾಗಿರುತ್ತದೆ. ಸದರಿ ವಾಡರ್್ ಮಹಾನಗರ ಪಾಲಿಕೆಯಲ್ಲಿಯೇ ಅತ್ಯಂತ ದೊಡ್ಡ ವಾಡರ್್ ಇದಾಗಿದ್ದು ಇಲ್ಲಿ ಸುಮಾರು 14 ಸಾವಿರ ಮತದಾರರು ವಾಸಿಸುತ್ತಿದ್ದಾರೆ.
ಈ ವಾಡರ್್ನಲ್ಲಿ ಎರಡು ಮೂರು ಸ್ಮಶಾನ ಇದ್ದು ಯಾವುದೇ ಸ್ಮಶಾನದಲ್ಲಿ ನೀರಿನ ಸೌಕರ್ಯ ಇರುವುದಿಲ್ಲ. ಮತ್ತು ಸ್ಮಶಾನದಲ್ಲಿ ಜಾಲಿಗಿಡಳಿಂದ ಕೂಡಿರುತ್ತದೆ. ಇಂದಿನ ಆಧುನಿಕ ಮಾಹಿತಿ ಯುಗದಲ್ಲಿ ಕೂಡ ಈ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿಮರ್ಾಣ ವಾಗಿರುವುದಿಲ್ಲ. ಇಲ್ಲಿನ ನಾಗರೀಕರು ಖಾಸಗಿವರಿಂದ 1 ಕೊಡಕ್ಕೆ 25 ರೂಪಾಯಿ ಕೊಟ್ಟು ಕೊಂಡು ಕೊಳ್ಳುತ್ತಿದ್ದಾರೆ. ಇಲ್ಲಿ ಯಾವುದೇ ಸಮಾಜದವರಿಗೆ ಒಂದು ಸಮುದಾಯ ಭವನ ಕೂಡ ಇರುವುದಿಲ್ಲ. ಗುಗ್ಗರಹಟ್ಟಿ ಮುಖ್ಯ ರಸ್ತೆ ಪ್ರವೇಶ ದ್ವಾರದಲ್ಲಿ (ಆಂಜಿನೇಯ ದೇವಸ್ಥಾನ ಎದುರುಗಡೆ) ಯಾವಾಗಲು ಕಸದಿಂದ ಕೂಡಿರುತ್ತದೆ. ಹಲವಾರು ತಿಂಗಳುಗಳ ಕಾಲ ಕಸವನ್ನು ಎತ್ತದೆ ಹಾಗೆ ಬಿಟ್ಟಿರುತ್ತಾರೆ. ಇದರಿಂದ ಪರಿಸರ ಮಾಲಿನ್ಯದಿಂದ ಸುತ್ತ ಮುತ್ತಲಿನ ಜನರು ಆಗಾಗ ವಿವಿಧ ಕಾಯಿಲೆಗಳಿಗೆ ತುತ್ತಾ ಗುತ್ತಿದ್ದಾರೆ. ವರ್ಷಕ್ಕೆ ಆರು ತಿಂಗಳಿಗೆ ಯಾವುದೇ ಅಭಿವೃದ್ಧಿ ಕೆಲಸ ನಡೆದರೆ ಅದು ಕೂಡ ಅತ್ಯಂತ ಕಳಪೆ ಕಾಮಗಾರಿಯಾಗಿರುತ್ತದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಜಯಂತಿ ದಿನದಂದು ದೇಶ ದಾಧ್ಯಂತ ಸ್ವಚ್ಚ ಭಾರತ ಆಂಧೋಲನ ಕೇಂದ್ರ ಮತ್ತು ರಾಜ್ಯ ಸಕರ್ಾರ ಆಚರಿಸುತ್ತಿದೆ. ಆದರೆ ಇಲ್ಲಿನ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವುದು ದುರದೃಷ್ಟಕರ. ಮೂಲಭೂತ ಸೌಲಭ್ಯಗಳನ್ನು ಸದರಿ ವಾಡರ್್ನ ಸಾರ್ವಜನಿಕರಿಗೆ ಒದಗಿಸಿ ನೆಮ್ಮದಿ ಮತ್ತು ಆರೋಗ್ಯಯುತ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ವಿಶ್ವ ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಜಿಲ್ಲಾ ಗೌರವ ಅಧ್ಯಕ್ಷರಾದ ಬಿ.ಬಸವರಾಜ ಮತ್ತು ಪಿ.ನರಸಿಂಹರೆಡ್ಡಿ, ಜಿಲ್ಲಾಧ್ಯಕ್ಷ ಜಿ.ಈಶ್ವರಪ್ಪ, ನಗರಾಧ್ಯಕ್ಷರಾದ ವಿ.ಬಿ.ಮಲ್ಲಯ್ಯ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ನೆಟ್ಟಿಕಂಟಯ್ಯ, ತಾಲೂಕು ಅಧ್ಯಕ್ಷ ಕಾವಲಿ ಮಾರೆಣ್ಣ, ಎಂ.ಡಿ. ರಫೀಕ್, ಬೈಲೂರು ವೆಂಕಟೇಶ್, ಮಲ್ಲಿಕಾಜರ್ುನ ಸೇರಿದಂತೆ ವೇದಿಕೆಯ ಕಾರ್ಯಕರ್ತರು ಆಯುಕ್ತರು, ಮಹಾನಗರ ಪಾಲಿಕೆಗೆ ಮನವಿ ಪತ್ರ ಸಲ್ಲಿಸಿದರು.